Kannada NewsKarnataka NewsLatest

ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ವೋಟರ್ ಹೆಲ್ಪಲೈನ್ ಆಪ್ ಮೂಲಕ ಮತದಾರ ನೋಂದಣಿಗೆ ಅವಕಾಶ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಪ್ರಗತಿವಾಹಿನಿ ಸುದ್ದಿ,
ಬೆಳಗಾವಿ : ಮಹಾನಗರ ಪಾಲಿಕೆ ವತಿಯಿಂದ ನಗರದ ಕೋಟೆಯಲ್ಲಿ ಬುಧವಾರ (ನ.9) ಆಯೋಜಿಸಲಾದ, ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಜಾಗೃತಿ ಮೂಡಿಸುವ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಚಾಲನೆ ನೀಡಿದರು.

ನಗರದ ಕೋಟೆಯಿಂದ ಪ್ರಾರಂಭವಾದ ಸೈಕಲ್ ಜಾಥಾ ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮಾ ವೃತ್ತ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಾಗಿತು. ಜಾಥಾದಲ್ಲಿ ಸಾರ್ವಜನಿಕರಿಗೆ ಮತದಾರರ ಪಟ್ಟಿಯ ಸಂಕ್ಷೀಪ್ತ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಬಿಡುಗಡೆ ಮಾಡುತ್ತಿದ್ದೇವೆ. ಸಂಬಂಧಿತ ಎಲ್ಲಾ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಪ್ರಕಟಿಸಲಾಗುವುದು. ರಾಜಕೀಯ ಪಕ್ಷಗಳಿಗೂ ಒಂದು ಪ್ರತಿ ನೀಡಲಾಗುವದು ಎಂದು ತಿಳಿಸಿದರು.

2023 ರ ಮಾರ್ಚ್, ಎಪ್ರಿಲ್‌ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಇರಲಿದೆ ಇದಕ್ಕೆ ಪೂರಕವಾಗಿ ಈ ಪರಿಷ್ಕರಣೆ ಮಾಡಲಾಗುತ್ತಿದೆ. ಡ್ರಾಫ್ಟ್ ಮತದಾರ ಪಟ್ಟಿ ಪ್ರಕಟಿಸಲಾಗುತ್ತಿದೆ ಅದರಲ್ಲಿ ಯಾವುದೇ ರೀತಿಯ ಆಕ್ಷೇಪಣೆಗಳು ಇದ್ದಲ್ಲಿ ಅರ್ಜಿ ಸಲ್ಲಿಸಬಹುದು. ಬಳಿಕ ಪರಿಷ್ಕೃತ ಪಟ್ಟಿ ಜನವರಿ 5 ರಂದು ಅಂತಿಮವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಮತದಾರರ ಚೀಟಿ ಆಧಾರ್ ಸಂಖ್ಯೆ ಜೋಡಣೆಗೆ ಅವಕಾಶ:

ಈಗಾಗಲೇ 80 ಪ್ರತಿಶತ ಮತದಾರರ ಚೀಟಿಗೆ ಆಧಾರ್ ಸಂಖ್ಯೆಗಳು ಜೊಡನೆಯಾಗಿವೆ. ಇನ್ನೂ ಲಿಂಕ್ ಮಾಡದ 20% ಮತದಾರರ ಆಧಾರ್ ಸಂಖ್ಯೆ ಜೋಡಣೆಗೆ ಅವಕಾಶ ಕೊಡಲಾಗುವುದು. ಆಧಾರ್ ಸಂಖ್ಯೆ ಜೊಡನೆಯಾಗದ ಮತದಾರರ ನೊಂದಣಿ ರದ್ದತಿಗೆ ಚುನಾವಣಾ ಆಯೋಗದಿಂದ ಯಾವುದೇ ಮಾಹಿತಿ ಬಂದಿಲ್ಲ ಆದಕಾರಣ ಆಧಾರ್ ಲಿಂಕ್ ಇರದ ಯಾವುದೇ ಮತದಾರರ ನೋಂದಣಿ ರದ್ದು ಮಾಡಿಲ್ಲ ಎಂದು ತಿಳಿಸಿದರು.

ವೋಟರ್ ಹೆಲ್ಪಲೈನ್ ಆಪ್ ಮೂಲಕ ಮೊಬೈಲ್‌ ನಲ್ಲಿ ಮನೆಯಲ್ಲಿಯೇ ಫಾರ್ಮ್‌ 8ರಲ್ಲಿ ವಿಳಾಸ, ಮೊಬೈಲ್ ನಂಬರ್, ಮತದಾರರ ಚೀಟಿ ವರ್ಗಾವಣೆ ಮಾಡಲು ನೊಂದಾಯಿಸಿ ಅರ್ಜಿ ಸಲ್ಲಿಸ್ಲು ಅವಕಾಶವಿರುತ್ತದೆ. ಸಾರ್ವಜನಿಕರು ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಮತ್ತಿತರ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು
***

ಮತದಾರರಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಮಾಡುವಂತೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಜನರಿಗೆ ಜಾಗೃತಿ ಮೂಡಿಸಲು ನಗರದ ಕಿಲ್ಲಾ ಕೋಟೆಯಿಂದ ಸೈಕಲ್  ರ‍್ಯಾಲಿ ನಡೆಸಲಾಯಿತು.

ಬುಧವಾರ ಬೆಳಗ್ಗೆ ಕಿಲ್ಲಾ ಕೋಟೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಚಾಲನೆ ನೀಡಿದರು. ಕಿಲ್ಲಾ ಕೋಟೆಯಿಂದ ಪ್ರಾರಂಭವಾದ ಸೈಕಲ್ ರ‍್ಯಾಲಿ ಆರ್ ಟಿಓ ವೃತ್ತ, ಚನ್ನಮ್ಮ‌ ವೃತ್ತ, ಬೋಗಾರವೆಸ್ ಮಾರ್ಗವಾಗಿ ಸಾಗಿತು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಅಪರ ಜಿಲ್ಲಾಧಿಕಾರಿ ಅಶೋಕ‌ ದುಡಗುಂಟಿ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

ಅಪ್ತಾಪ್ತ ಬಾಲಕಿಗೆ ಚುಡಾಯಿಸಿದ ಅಪ್ತಾಪ್ತ ಬಾಲಕ; ಬುದ್ಧಿ ಹೇಳಲು ಹೋದ ನಾಲ್ವರಿಗೆ ಚೂರಿ ಇರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button