Latest

ಸಿದ್ದರಾಮಯ್ಯ ಅಬ್ಬೇಪಾರಿಯಾಗಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಬಗ್ಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿದ್ದರಾಮಯ್ಯ ಅಬ್ಬೇಪಾರಿಯಂತಾಗಿದ್ದಾರೆ. ಜನರ ವಿಶ್ವಾಸವನ್ನುಗಳಿಸಲಾಗದೇ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

Home add -Advt

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಅಲ್ಲಿನ ಜನರು ಅವರನ್ನು ಸೋಲಿಸಬೇಕು. ಕಾರಣ ಅವರು ಚಾಮುಂಡೇಶ್ವರಿಯಿಂದ ನಿಂತರು. ಅಲ್ಲಿನ ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ಬಾದಾಮಿಯಲ್ಲಿ ಏನು ಪುಣ್ಯ ಇತ್ತೋ ಅಲ್ಲಿಂದ ಗೆದ್ದು ಬಂದರು. ಆದರೆ ಅಲ್ಲಿನ ಜನರಿಗೆ ಏನು ಮಾಡಿದ್ದಾರೆ? ಕ್ಷೇತ್ರದ ಅಭಿವೃದ್ಧಿ, ಜನಪರ ಕೆಲಸ ಮಾಡದೇ ಈಗ ಬಾದಾಮಿಯನ್ನೂ ಬಿಟ್ಟು ಬೇರೆಡೆ ಮುಖ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈಗ ಕೋಲಾರದಲ್ಲಿ ಸ್ಪರ್ಧೆಗೆ ನಿಂತರೆ ಅವರನ್ನು ಅಲ್ಲಿನ ಜನ ಸೋಲಿಸಬೇಕು. ಈ ಬಗ್ಗೆ ನಾನು ಜನರಿಗೆ ಕರೆ ಕೊಡುತ್ತೇನೆ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಕೆಲಸ ಮಾಡದ ಕಾರಣ ಅಲ್ಲಿನ ಜನರು ಅವರನ್ನು ಓಡಿಸಿದ್ರು. 5 ವರ್ಷ ಸಿಎಂ ಆಗಿದ್ದರು ಯಾವುದೇ ಜನಪರ ಆಡಳಿತ ನಡಿಸಿಲ್ಲ. ಜನರ ವಿಶ್ವಾಸ ಗೆದ್ದಿಲ್ಲ. ಈಗ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂದೂ ಗೊತ್ತಾಗದೇ ಹುಡುಕಾಟದಲ್ಲಿದ್ದಾರೆ. ಸಿದ್ದರಾಮಯ್ಯ ಒಂದು ರೀತಿ ಅಬ್ಬೇಪಾರಿಯಂತಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ; 18ಜನರ ವಿರುದ್ಧ FIR ದಾಖಲು

https://pragati.taskdun.com/politics/eranna-kadadi-car-attack-case18-peoplefir-file/

Related Articles

Back to top button