Latest

ನಟಿ ತೇಜಸ್ವಿನಿಗೆ ಕಾರ್ಪೋರೇಟರ್ ನೀಡಿದನಂತೆ ನೇರ ಆಫರ್!

ಪ್ರಗತಿವಾಹಿನಿ ಸುದ್ದಿ, ಮುಂಬೈ: ಇತ್ತೀಚಿನ ವರ್ಷಗಳಲ್ಲಿ ಸಿನೆಮಾ ನಟಿಯರು ಖಾಸಗಿ ವಿಷಯಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಪ್ರಚಾರ ಪಡೆಯುವುದು ಸಾಮಾನ್ಯ. ಸಾಮಾನ್ಯ ಮಹಿಳೆಯರ ಪಾಲಿಗೆ ಇದು ಪ್ರತಿಷ್ಠೆಗೆ ‘ಡ್ಯಾಮೇಜ್’ ಆಗಿಸುವ ವಿಷಯವಾದರೂ ನಟಿಯರ ಪಾಲಿಗೆ ಇಮೇಜ್ ಹೆಚ್ಚಿಸಿಕೊಳ್ಳುವ ವಿಷಯವಾಗುತ್ತಿದೆ.

ಈ ಸಾಲಿಗೆ ಇದೀಗ ಮರಾಠಿ ನಟಿ ತೇಜಸ್ವಿನಿ ಪಂಡಿತ್ ಸೇರ್ಪಡೆಯಾಗಿದ್ದಾರೆ. ಕಾರ್ಪೋರೇಟರ್ ಒಬ್ಬರು ನೀಡಿದ ಆಫರ್ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಅವರು ಪುಣೆಯ ಕಾರ್ಪೊರೇಟರ್‌ನಿಂದ 2009-10ರಲ್ಲಿ ಪಡೆದು ವಾಸವಿದ್ದ ಅಪಾರ್ಟ್‌ಮೆಂಟ್‌ನ ಬಾಡಿಗೆ ಹಣ ನೀಡಲು ಅವರ ಕಚೇರಿಗೆ ಹೋದಾಗ ಕಾರ್ಪೋರೇಟರ್ ತಮಗೆ ನೇರವಾಗಿ ‘ಆಫರ್’ ನೀಡಿದ್ದಾಗಿ ತೇಜಸ್ವಿನಿ ಹೇಳಿಕೊಂಡಿದ್ದಾರೆ.

ಇದರಿಂದ ಕೋಪಗೊಂಡ ತಾವು ಮೇಜಿನ ಮೇಲೆ ಇರಿಸಲಾಗಿದ್ದ ನೀರು ತುಂಬಿದ ಲೋಟವನ್ನು ತೆಗೆದುಕೊಂಡು ಕಾರ್ಪೋರೇಟರ್ ಮುಖಕ್ಕೆ ಎಸೆದಿದ್ದಾಗಿಯೂ ಹೇಳಿಕೊಂಡಿದ್ದಾರೆ.

ಮಗು ಎತ್ತಿಕೊಂಡೇ ಸದನದ ಕಲಾಪಕ್ಕೆ ಬಂದ ಶಾಸಕಿ!

https://pragati.taskdun.com/the-mla-who-came-to-the-session-of-the-house-with-the-baby-picked-up/

ಪ್ರತಿಭಟನೆ ಹಿಂಪಡೆಯಲು ರೈತರಿಗೆ ಗೃಹ ಸಚಿವರ ಮನವಿ

 

https://pragati.taskdun.com/home-minister-araga-jnyanendra-visited-to-formers-protest-in-belagavi/

*ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಯಾತ್ರೆ*

https://pragati.taskdun.com/yatra-of-congress-leaders-in-the-wake-of-the-legislative-assembly-elections/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button