Latest

ಮಗು ಎತ್ತಿಕೊಂಡೇ ಸದನದ ಕಲಾಪಕ್ಕೆ ಬಂದ ಶಾಸಕಿ!

ಪ್ರಗತಿವಾಹಿನಿ ಸುದ್ದಿ, ನಾಗಪುರ: ವಿಧಾನ ಸಭೆ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಗು ಹೊತ್ತುಕೊಂಡು ಬಂದ ಶಾಸಕಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.

ಶಾಸಕಿ ಸರೋಜ್ ಅಹಿರೆ ಅವರು ಸುಮಾರು ಮೂರು ತಿಂಗಳ ಕೂಸನ್ನು ಬೆಚ್ಚಗಿನ ಉಣ್ಣೆ ಬಟ್ಟೆಗಳಲ್ಲಿ  ಭದ್ರವಾಗಿ  ಮಡಗಿಕೊಂಡು ನಾಗಪುರದಲ್ಲಿ ಚಳಿಗಾಲದ ವಿಧಾನಸಭೆ ಅಧಿವೇಶನಕ್ಕೆ ಹಾಜರಾದರು.

Home add -Advt

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸದನ ಪ್ರವೇಶಿಸಿದ ಒಂದು ಗಂಟೆಯೊಳಗೆ ಮಗುವಿಗೆ ನೇರ ಪ್ರವೇಶ ಸಿಕ್ಕಿತು.  ತಾಯಿ- ಮಗುವಿನೊಂದಿಗೆ ವಿಶೇಷ ಫೋಟೋ ಸೆಷನ್  ಕೂಡ ನಡೆಯಿತು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸರೋಜ ಅಹಿರೆ, “ಮತ್ತೊಬ್ಬ ಮಹಿಳಾ ಶಾಸಕಿ ಮತ್ತು ನಾನು ಈ ವರ್ಷದ ಆರಂಭದಲ್ಲಿ ವಿಧಾನ ಭವನದಲ್ಲಿ ಬೇಬಿ ಡೇ-ಕೇರ್ ಮಾದರಿಯ ಸೌಲಭ್ಯಕ್ಕಾಗಿ ಈ ಬೇಡಿಕೆಯನ್ನು ಮಾಡಿದ್ದೆವು, ನಾವಿಬ್ಬರೂ ಗರ್ಭಿಣಿಯಾಗಿದ್ದೆವು. ಶಾಸಕರ ಶಿಶುಗಳು ಅಥವಾ ಚಿಕ್ಕ ಮಕ್ಕಳಿಗಾಗಿ ವಿಶೇಷ ವ್ಯವಸ್ಥೆಗಳಿಗಾಗಿ ಸಿಎಂ ಗಮನ ಸೆಳೆಯಲಾಗಿತ್ತು. ಇದೀಗ ಆ ವ್ಯವಸ್ಥೆಯಾಗಿದೆ. ಆದರೆ ನಾನು ಸೋಮವಾರ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ,  ಈಗಾಗಲೇ ನಮ್ಮ ಪಕ್ಷದ ಕಚೇರಿಯಲ್ಲಿ ವ್ಯವಸ್ಥೆ ಮಾಡಿದ್ದೆ. ಖಂಡಿತವಾಗಿಯೂ ಮಂಗಳವಾರ ವ್ಯವಸ್ಥೆ ಪರಿಶೀಲಿಸುತ್ತೇನೆ,” ಎಂದರು.

*ಶಾಸಕ ಅರವಿಂದ ಬೆಲ್ಲದ್ ಗೆ ವೇದಿಕೆಯಲ್ಲೇ ಉಗಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್*

https://pragati.taskdun.com/mla-lakshmi-hebbalkar-who-was-angry-with-mla-arvind-bellad-on-stage/

*ಬೆಳಗಾವಿಯಿಂದ ಕಾಂಗ್ರೆಸ್ ಬಸ್ ಯಾತ್ರೆ ಆರಂಭ*

https://pragati.taskdun.com/belagavicongress-bus-yatrakrishnamahadaicongress-meetingd-k-shivakumarsiddaramaiah/

*ಪ್ರಕೃತಿ ಮೇಲಿನ ದುಷ್ಪರಿಣಾಮಗಳನ್ನು ಸರಿದೂಗಿಸಲು ಹಸಿರು ಆಯವ್ಯಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/belagavicongress-bus-yatrakrishnamahadaicongress-meetingd-k-shivakumarsiddaramaiah/

Related Articles

Back to top button