Latest

ಸಂಪದ್ಭರಿತ ಪ್ರಕೃತಿಯ ಮಧ್ಯದಿಂದ ಕೈಬೀಸಿ ಕರೆಯುವ ಚಿಕ್ಕದೇವಮ್ಮನ ಬೆಟ್ಟ

ಲೇಖನ:ಸುಮಾ ಸಿ. ಎಸ್.

ಐತಿಹಾಸಿಕ ಮೈಸೂರು ನಗರದಿಂದ ಕೇವಲ 65 ಕಿ. ಮೀ. ದೂರದಲ್ಲಿ ಸಂಪದ್ಭರಿತ ಪ್ರಕೃತಿ ಹೊಂದಿರುವ ಚಿಕ್ಕದೇವಮ್ಮನ ಬೆಟ್ಟ ಇದೆ. ಇದು ಬೆಂಗಳೂರು ನಿಂದ 205 ಕಿ. ಮೀ. ದೂರದಲ್ಲಿದೆ ಇದು ಹೆಚ್ಚು ಜನರಿಗೆ ಅಷ್ಟಾಗಿ ತಿಳಿಯದ ಒಂದು ಅಪರಿಚಿತ ಸ್ಥಳ.

ಬೆಟ್ಟದ ಮೇಲೆ ನೋಡುವಂತಹ ಯಾವುದೇ ವಿಶೇಷ ಸ್ಥಳವಿಲ್ಲದಿದ್ದರೂ ಅದರ ಮೇಲೆ ನಿಂತು ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದೇ ಈ ಬೆಟ್ಟದ ವೈಶಿಷ್ಟ್ಯ. ಈ ಖಾಲಿ ಬೆಟ್ಟದಲ್ಲಿ ಮನಸ್ಸನ್ನು ಕರಗಿಸುವ ಅದಮ್ಯ ಶಕ್ತಿ ಅಡಗಿದೆ. ಈ ಸ್ಥಳವು ಚಿಕ್ಕದೇವಮ್ಮ ಎಂಬ ದೇವತೆಯ ಹೆಸರಿನಿಂದ ಪ್ರವರ್ಧಮಾನಕ್ಕೆ ಬಂದಿದ್ದು, ಬೆಟ್ಟದ ಮೇಲೆ ನೆಲೆಗೊಂಡಿರುವ ಈ ದೇವಿಯ ದೇವಸ್ಥಾನವನ್ನು ಚಿಕ್ಕದೇವಮ್ಮನ ಬೆಟ್ಟ ಎಂದು ಕರೆಯುತ್ತಾರೆ.

ಮೈಸೂರು- ಎಚ್ ಡಿ ಕೋಟೆ ರಸ್ತೆಯಲ್ಲಿ ಸಾಗಿದರೆ ಹ್ಯಾಂಡ್ ಪೋಸ್ಟ್ ಎಂಬ ಸ್ಥಳ ಸಿಗುತ್ತದೆ. ಇದು ಕೇರಳದ ಮಾನಂದವಾಡಿ ಬಿಚ್ಚಾನಹಳ್ಳಿ ಡ್ಯಾಮ್ ತಾರಕ ಡ್ಯಾಮ್ ಹಾಗೂ ಹಲವು ಕಡೆ ಸಂಧಿಸುವ ಕೇಂದ್ರವಾಗಿದೆ ಹ್ಯಾಂಡ್ ಪೋಸ್ಟ್ ನಿಂದ ಎಡ ತಿರುವು ಪಡೆದು ಹೊರಟರೆ ಮುಂದೆ ಸಿಗುವುದೇ ಸರಗೂರು ಅನಂತರ ಸಿಗುವುದೇ ಚಿಕ್ಕದೇವಮ್ಮನ ಬೆಟ್ಟ ಬೆಟ್ಟವು ದೂರದಿಂದಲೂ ಆಕರ್ಷಣೆ ಇಂದ ಕಂಡರೂ ಬೆಟ್ಟದ ಬುಡದಿಂದ ಮೇಲಕ್ಕೆ ಹೋಗಲು ರಸ್ತೆಯ ಮೂಲಕ 5 ಕಿ. ಮೀ. ದೂರವನ್ನು ಕ್ರಮಿಸಬೇಕು.

ಈ ಹಿಂದೆ ರಸ್ತೆಯು ದುರ್ಗಮ ಸ್ಥಿತಿಯಲ್ಲಿ ಕಂಡು ಬರುತ್ತದೆ. ಇತ್ತೀಚೆಗೆ ಸುಸಜ್ಜಿತ ಡಂಬರು ರಸ್ತೆಯಾಗಿ ಮರ್ಪಟ್ಟಿದೆ ಇಲ್ಲಿನ ಆಯಕಟ್ಟು ಪ್ರದೇಶವು ಅತ್ಯಂತ ಕಿರಿದಾಗಿದೆ ಬೆಟ್ಟದ ನಾಲ್ಕು ಮೂಲೆಗಳಲ್ಲಿ ನಿಂತು ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಿ ಆನಂದಿಸಬಹುದಾಗಿದೆ. ಬೆಟ್ಟದ ಮೇಲೆ ಹಳೆಯ ದೇವಸ್ಥಾನವೊಂದಿದ್ದೆ ಅದರ ಪಕ್ಕದಲ್ಲೇ ಈಗ ಹೊಸದಾಗಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ತಮಿಳುನಾಡಿನ ಶಿಲ್ಪಿಗಳು ದೇವಸ್ಥಾನ ಅಂತಿಮ ರೂಪ ಕೊಟ್ಟಿದ್ದು ಅದೀಗ ಮುಗಿಯುವ ಹಂತಕ್ಕೆ ಬಂದಿದೆ.

ಆಗಮಿಸುವ ಭಕ್ತಾದಿಗಳಿಗೆ ಅನುಕೂಲಕ್ಕಾಗಿ ಬೆಳ್ಳಿಗೆಯಿಂದ ಸಂಜೆಯವರೆಗೂ ಪೂಜೆ ಪುನಸ್ಕಾರ ನಡೆಯುತ್ತಿರುತ್ತದೆ. ಬೆಟ್ಟದ ವೀಕ್ಷಣಾ ಹೋಗುವವರು ತಮ್ಮ ಆಹಾರ ಪದಾರ್ಥಗಳನ್ನು ತಾವೇ ಕೊಂಡೊಯ್ಯಬೇಕು. ಅಲ್ಲಿ ಪೂಜೆ ಸಾಮಗ್ರಿಗಳು ಮಾತ್ರ ಲಭ್ಯ ವಾಹನಗಳನ್ನು ನಿಲ್ಲಿಸಲು ಸಾಕಷ್ಟು ಸ್ಥಳವಕಾಶವಿದೆ. ಈ ಪ್ರದೇಶದಲ್ಲಿ ಎತ್ತರಕ್ಕೆ ಹೊಂದಿದ್ದರಿಂದ ತಂಪಿನ ಹವಾಗುಣ ಹೊಂದಿದೆ ಬೆಟ್ಟದ ಪಶ್ಚಿಮ ದಿಕ್ಕಿನಲ್ಲಿ ಜಲಾವೃತಗೊಂಡ ನುಗು ಡ್ಯಾಮ್ ಮೇಲಿನಿಂದ ಅತ್ಯಂತ ರಮ್ಯ ನೋಟವಾಗಿದೆ.

*ರಾಜ್ಯದಲ್ಲಿ ಮೀಸಲಾತಿಯನ್ನು ಸಂಪೂರ್ಣ ರದ್ದುಪಡಿಸಿ: ಕೋಡಿಹಳ್ಳಿ ಚಂದ್ರಶೇಖರ್*

https://pragati.taskdun.com/abolish-reservation-completely-in-the-state-kodihalli-chandrasekhar/

*ಬೆಸ್ಕಾಂ ಉದ್ಯೋಗದಲ್ಲಿ ಗೋಲ್ ಮಾಲ್; ಎಂಜಿನಿಯರ್ ಸೇರಿ 6 ಆರೋಪಿಗಳ ಬಂಧನ*

https://pragati.taskdun.com/bescom-scamchitradurga6-officers-arrrested/

*ಜೀವಾವಧಿ ಶಿಕ್ಷೆಗೊಳಗಾಗಿದ್ದ ವೀರಪ್ಪನ್ ಸಹಚರ ಬಿಡುಗಡೆ*

https://pragati.taskdun.com/release-of-veerappans-accomplice-who-was-sentenced-to-life-imprisonment/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button