
ಪ್ರಗತಿವಾಹಿನಿ ಸುದ್ದಿ, ಮುಂಬೈ: ಸಿಇಒ ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ Dream11 ತಮ್ಮ ವಾರದ ಅವಧಿಯ “ಅನ್‌ಪ್ಲಗ್” ಸಮಯದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಸಂಪರ್ಕಿಸುವ ಉದ್ಯೋಗಿಗಳಿಗೆ 1 ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಿದೆ.
ಈ ಹೊಸ ನೀತಿಯ ಬಗ್ಗೆ ಸಿಇಒ ಹರ್ಷ್ ಜೈನ್ CNBC ಗೆ ತಿಳಿಸಿದ್ದಾರೆ. Dream11 ಇತ್ತೀಚೆಗೆ ಪರಿಚಯಿಸಿದ ಈ ಹೊಸ ನೀತಿ ಪ್ರಕಾರ, ನೌಕರರು ವರ್ಷಕ್ಕೊಮ್ಮೆ ಒಂದು ವಾರದವರೆಗೆ ಕಂಪನಿಯ ವ್ಯವಸ್ಥೆಯಿಂದ ಹೊರಗಿರುತ್ತಾರೆ. ಈ ಅವಧಿಯಲ್ಲಿ ಅವರು ತಮ್ಮ ರಜಾದಿನಗಳನ್ನು ಯಾವುದೇ ತೊಡಕು, ಒತ್ತಡವಿಲ್ಲದೇ ಆನಂದಿಸಬೇಕು. ಹೀಗೆ ರಜೆ ಆನಂದಿಸುವ ಸಿಬ್ಬಂದಿಗೆ ಕರ್ತವ್ಯದಲ್ಲಿರುವ ಸಿಬ್ಬಂದಿ ಯಾವುದೇ ಕೆಲಸದ ಬಗ್ಗೆ ಫೋನ್ ನಲ್ಲಿ ಸಂಪರ್ಕಿಸಿದರೆ ಅಂಥ ಸಿಬ್ಬಂದಿಗೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
“ನಾವು ಯಾರ ಮೇಲೆ ಅವಲಂಬಿತರಾಗಿದ್ದೇವೆಯೇ ಎಂದು ತಿಳಿಯಲು ಈ ಹೊಸ ನೀತಿ ಸಹಾಯ ಮಾಡುತ್ತದೆ” ಎಂದು ಹರ್ಷ ಜೈನ್ ತಿಳಿಸಿದ್ದಾರೆ.
ಕ್ರೀಡಾ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಕೇಸ್
https://pragati.taskdun.com/sexual-harassment-case-against-sports-minister/
ನೋಟು ಅಮಾನ್ಯೀಕರಣ ಅಮಾನ್ಯವಲ್ಲ – ಸುಪ್ರಿಂ ಕೋರ್ಟ್ ತೀರ್ಪು
https://pragati.taskdun.com/demonetisation-not-invalid-supreme-court-judgement/
ಬೈಲಹೊಂಗಲ: ಕಲ್ಲಿನಿಂದ ಹೊಡೆದು ಮರ್ಡರ್
https://pragati.taskdun.com/murder-near-bailhongal/