Kannada NewsLatest

*ಮನೆ ಮೇಲೆ ಬಿದ್ದ ಕಬ್ಬಿನ ಟ್ರ್ಯಾಕ್ಟರ್; ಮಹಿಳೆ ದುರ್ಮರಣ; ಛಾವಣಿ ಕೆಳಗೆ ಸಿಲುಕಿ 6 ಕುರಿಗಳು ಸಾವು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಬ್ಬುತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್ ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೈಲಹೊಂಗಲ ತಾಲೂಕಿನ ಶೀಗಿಹಳ್ಳಿಯ ಕೆ.ಎಸ್.ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ 6 ಜನರು ಗಾಯಗೊಂಡಿದ್ದಾರೆ. ಮರಿಕಟ್ಟಿ ಗ್ರಾಮದಿಂದ ಕಬ್ಬು ತುಂಬಿಕೊಂಡು ಕಬ್ಬು ಕಾರ್ಖಾನೆಗೆ ಹೋಗುತ್ತಿದ್ದ ವೇಳೆ ಶೀಗಿಹಳ್ಳಿ ಗ್ರಾಮದ ಬಳಿ ತಿರುವಿನಲ್ಲಿ ಅಜ್ಜಪ್ಪ ಬಡಿಗೇರ ಎಂಬುವವರ ಮನೆ ಮೇಲೆ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಘಟನೆಯಲ್ಲಿ ಪುಲಾರಕೊಪ್ಪದ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಾಯಾಳುಗಳನ್ನು ಹಿರೇಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಟ್ರ್ಯಾಕ್ಟರ್ ಬಿದ್ದ ಹೊಡೆತಕ್ಕೆ ಮನೆ ಚಾವಣಿ ಕೆಳಗೆ ಸಿಲುಕಿ 6 ಕುರಿಗಳು ಸಾವನ್ನಪ್ಪಿವೆ. ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

*ಬರೋಬ್ಬರಿ 1.14 ಕೋಟಿ ರೂಪಾಯಿ ಜಪ್ತಿ*

https://pragati.taskdun.com/hubli1-14-croreseizedpolice/

Related Articles

Back to top button