Latest

ವಿದೇಶದಲ್ಲಿ ನೌಕರಿ ಆಮಿಷವೊಡ್ಡಿ ವಂಚನೆ; ನೈಜಿರಿಯಾ ಪ್ರಜೆ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಲಕ್ಷಾಂತರ ಹಣ ಪಡೆದು ವಂಚಿಸಿದ ನೈಜಿರಿಯಾ ಪ್ರಜೆಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ನೋಕೊಚಾ ಕಸ್ಮೀರ್‌ ಇಕೆಂಬಾ ಬಂಧಿತ ಆರೋಪಿ. ಈತನನ್ನು ಬಂಧಿಸಿರುವ ಈಶಾನ್ಯ ಸೈಬರ್ ಕ್ರೈಂ ಠಾಣೆ ಪೊಲೀಸರು ಸಿಮ್‌ ಕಾರ್ಡ್‌ಗಳು, 6 ಮೊಬೈಲ್‌ ಫೋನ್‌ಗಳು, 1 ಲ್ಯಾಪ್‌ಟಾಪ್‌, 2 ಡೆಬಿಟ್‌ ಕಾರ್ಡ್‌ ಹಾಗೂ ಪಾಸ್‌ಪೋರ್ಟ್‌ ವಶಪಡಿಸಿಕೊಂಡಿದ್ದಾರೆ.

ಈತ ಯುಕೆಯ ಶೆಲ್‌ ಆಯಿಲ್‌ ಕಂಪನಿಯಲ್ಲಿ ಮ್ಯಾನೇಜರ್‌ ಹುದ್ದೆ, ಆಸ್ಪತ್ರೆಗಳಲ್ಲಿ ಸ್ಟಾಫ್‌ ನರ್ಸ್‌, ಶೆಫ್‌ ಮುಂತಾದ ಉದ್ಯೋಗಗಳನ್ನು ಕೊಡಿಸುವುದಾಗಿ ಹೇಳಿ ಹಲವರಿಗೆ ಇ-ಮೇಲ್‌ ಕಳುಹಿಸುತ್ತಿದ್ದ. ಇದಕ್ಕೆ ಮರುಳಾಗಿ ಮೊಬೈಲ್‌ನಲ್ಲಿ ಸಂಪರ್ಕಿಸಿದವರಿಂದ ನಾನಾ ರೀತಿಯ ಶುಲ್ಕಗಳನ್ನು ಹೇಳಿ ಲಕ್ಷಾಂತರ ರೂ. ಪಡೆದು ಬೇರೆಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ನಂತರ ಸಂಪರ್ಕ ಕಡಿತ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಡೆಬೊಮ್ಮಸಂದ್ರ ನಿವಾಸಿ ಮಲರ್‌ ಕೋಡಿ (45) ಎಂಬುವವರಿಗೆ ಇ-ಮೇಲ್‌ ಕಳುಹಿಸಿದ ಆರೋಪಿ, ಅವರಿಗೆ ಯುಕೆಯಲ್ಲಿ ಸ್ಟಾಫ್‌ ನರ್ಸ್‌ ಕೆಲಸ ಕೊಡಿಸುವುದಾಗಿ ತಿಳಿಸಿದ. ಇದನ್ನು ನಂಬಿದ ಮಲರ್ ಕೋಡಿ ಅವರು ಮೊಬೈಲ್‌ ಮೂಲಕ ಸಂಪರ್ಕಿಸಿ ಆತ ಹೇಳಿದಂತೆ ಬಯೋಡಾಟಾ ಇನ್ನಿತರ ವಿವರಗಳನ್ನು ಕಳುಹಿಸಿದ್ದಾರೆ.

ಅವರಿಂದ ಕ್ಲಿಯರೆನ್ಸ್‌ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳನ್ನು ಭರಿಸಬೇಕೆಂದು ಹೇಳಿದ ಆರೋಪಿ ಹಲವು ಕಂತುಗಳಲ್ಲಿ 34.07 ಲಕ್ಷ ರೂ. ಪಡೆದು ಬ್ಯಾಂಕ್‌ ಖಾತೆಗಳಿಗೆ  ವರ್ಗಾಯಿಸಿಕೊಂಡಿದ್ದ.

ಇತ್ತ ಕೆಲಸವೂ ಇಲ್ಲ, ಹಣವೂ ಇಲ್ಲ ಎಂದಾದಾಗ ಮಲರ್ ಕೋಡಿ ಅವರು ಹಣ ಮರಳಿಸುವಂತೆ ಒತ್ತಾಯಿಸಿದಾಗ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ಈ ಕುರಿತು ಮಲರ್ ಕೋಡಿ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

ದೂರನ್ನಾಧರಿಸಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಫರೀದಾಬಾದ್ ನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ವಂಚನೆ ಪ್ರಕರಣದಲ್ಲಿ ಹೈದರಾಬಾದ್ ಮತ್ತು ತಮಿಳುನಾಡು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ೆಂದು ಪೊಲೀಸರು ತಿಳಿಸಿದ್ದಾರೆ.

ನಾಳೆಯಿಂದ ಸ್ಥಗಿತಗೊಳ್ಳಲಿವೆ ಸರಕಾರಿ ಸೇವೆಗಳು; ರಾಜ್ಯ ಸರಕಾರಿ ನೌಕರರ ಮುಷ್ಕರದ ಮಾರ್ಗಸೂಚಿ ಬಿಡುಗಡೆ

https://pragati.taskdun.com/government-services-to-be-suspended-from-tomorrow-release-of-guidelines-for-state-government-employees-strike/

ರಮೇಶ ಜಾರಕಿಹೊಳಿ ಟಾರ್ಗೆಟ್ ಮಾಡಿದ್ದು ಬೆಳಗಾವಿಯ 6+1 ಕ್ಷೇತ್ರ!

https://pragati.taskdun.com/ramesh-jarakiholi-targeted-the-61-constituency-of-belgaum/

32 ಕೋಟಿ ರೂ.ವೆಚ್ಚದಲ್ಲಿ ಚಿಕ್ಕೋಡಿ ನ್ಯಾಯಾಲಯ ಕಟ್ಟಡ: ಸಂಸದ ಅಣ್ಣಾಸಾಹೇಬ ಜೊಲ್ಲೆ ಶಂಕುಸ್ಥಾಪನೆ

https://pragati.taskdun.com/chikkodi-court-building-at-a-cost-of-rs-32-crore-mp-annasaheb-jolle-lays-the-foundation-stone/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button