ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರು ಬಲಿಯಾಗಿದ್ದಾರೆ.
ಯಮನಪ್ಪ ಪ್ರಕಾಶ ರೆಡ್ಡರಟ್ಟಿ (10) ಹಾಗೂ ಯೇಶು ಬಸಪ್ಪ (14) ಮತರಾದ ಬಾಲಕರು. ಭಾನುವಾರ ಸಂಜೆ 4.30ರ ಹೊತ್ತಿಗೆ ಈ ಬಾಲಕರು ಈಸಲೆಂದು ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಈ ವೇಳೆ ಯಮನಪ್ಪ ನೀರಿನಲ್ಲಿ ಮುಳುಗುತ್ತಿದ್ದ. ಆತನನ್ನು ರಕ್ಷಿಸಲು ಯೇಶು ಪ್ರಯತ್ನಿಸಿದ್ದಾನೆ. ಆದರೆ ಇಬ್ಬರೂ ಬದುಕುಳಿಯಲಿಲ್ಲ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ