Kannada News

ಉಚಗಾಂವ ಕೇಸರಿ ಕುಸ್ತಿ ಪಂದ್ಯಾವಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ​

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉಚಗಾಂವ ಗ್ರಾಮದ ಶ್ರೀ ಹನುಮಾನ ಕುಸ್ತಿ ಸಂಘದ ವತಿಯಿಂದ ಆಯೋಜಿಸಿದ್ದ ಉಚಗಾಂವ ಕೇಸರಿ ಕುಸ್ತಿ ಪಂದ್ಯಾವಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸಂಜೆ ಚಾಲನೆಯನ್ನು ನೀಡಿದರು.

​ಬೆಳಗಾವಿ ಗ್ರಾಮೀಣ ಕ್ಷೇತ್ರ ವೈವಿದ್ಯತೆಗೆ ಹೆಸರಾಗಿದ್ದು, ಕ್ರೀಡೆ ಸೇರಿದಂತೆ ಕ್ಷೇತ್ರದ ವೈಶಿಷ್ಟ್ಯಗಳಿಗೆ ಸರ್ವ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಅವುಗಳಿಗೆ ಇನ್ನಷ್ಟು ಸಹಕಾರ ನೀಡಲು ಮುಂದಿನ ದಿನಗಳಲ್ಲಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು. 

ಈ ಭಾಗದ ಯುವಕರು ಅತ್ಯಂತ ಕ್ರಿಯಾಶೀಲರಾಗಿದ್ದು, ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಅದಕ್ಕೆ ತಕ್ಕ ಪ್ರೋತ್ಸಾಹ, ಸಹಕಾರ ಅವರಿಗೆ ಈ ಹಿಂದೆ ಸಿಗಲಿಲ್ಲ. ಇದಕ್ಕಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಸಧ್ಯವೇ ಆಡಳಿತಕ್ಕೆ ಬರಲಿರುವ ಕಾಂಗ್ರೆಸ್ ಸರಕಾರದಿಂದ ಅವುಗಳನ್ನು ಜಾರಿಗೊಳಿಸಲಾಗುವುದು ಎಂದು ಹೆಬ್ಬಾಳಕರ್ ತಿಳಿಸಿದರು. 

ಈ ಸಮಯದಲ್ಲಿ ಗ್ರಾಮದ ಹಿರಿಯರು,​ ಯುವರಾಜ ಕದಂ,​ ಜಾವೇದ ಜಮಾದಾರ, ಬಸು ತೆರಸೆ ಪದ್ಮರಾಜ ಪಾಟೀಲ, ಸೋಮನಾಥ ಪಾಟೀಲ, ರಘು ಖಂಡೆಕರ್ ನಾಣು ಕೊರಡೆ ಅಪ್ಪಾಜಿ ಜಾದವ ಎಲ್ ಡಿ ಚೌಗಲೆ ಸುನಿಲ ದೇಸಾಯಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button