ಹಿಂಡಲಗಾದ ವಿವಿಧೆಡೆ ಉದ್ಯಾನಗಳ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ವಿವಿಧೆಡೆ ಹರಿದು ಹಂಚಿಹೋಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರತೆಯನ್ನು ಎದುರಿಗಿಟ್ಟುಕೊಂಡು ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಬಿಡುವಿಲ್ಲದೆ ಶ್ರಮಿಸಿದ್ದೇನೆ. ಐದು ವರ್ಷಗಳಲ್ಲಿ ಜನತೆಯ ಶ್ರೇಯೋಭಿವೃದ್ಧಿಯೇ ನನ್ನ ಉಸಿರಾಗಿಸಿಕೊಂಡು ಮಾಡಿರುವ ಕೆಲಸ ಕಾರ್ಯಗಳಿಗೆ ಕ್ಷೇತ್ರದ ಜನತೆಯೇ ಜೀವಂತ ಸಾಕ್ಷಿ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಮರಾಠಾ ಕಾಲೋನಿಯಲ್ಲಿ ನೂತನ ಉದ್ಯಾನ (ಗಾರ್ಡನ್) ನಿರ್ಮಾಣದ ಸಲುವಾಗಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಿಡುಗಡೆಗೊಂಡ 50 ಲಕ್ಷ ರೂ. ಅನುದಾನದಲ್ಲಿ ಉದ್ಯಾನ ನಿರ್ಮಾಣದ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
“ಕ್ಷೇತ್ರಕ್ಕೆ ಹೊಸ ಕಾಮಗಾರಿಗಳಿಗೆ ಅನುದಾನ ತರುವಾಗ ಪಟ್ಟ ನೋವು ಯಾರಲ್ಲೂ ಹೇಳಿಕೊಂಡಿಲ್ಲ. ಆದರೆ ಜನಹಿತವೇ ಉಸಿರಾಗಿಸಿಕೊಂಡು ಜನಬಲದಿಂದಲೇ ಮುಂದಡಿ ಇಟ್ಟು ಶಕ್ತಿ ಮೀರಿ ಅನುದಾನ ತಂದಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷದ ಸರಕಾರ ರಚನೆಯಾಗುವ ನಿಟ್ಟಿನಲ್ಲಿ ಬೆಂಬಲಿಸಿದರೆ ಸರಕಾರದ ಭಾಗವಾಗಿ ಬಂದು ಇನ್ನೂ ಹೆಚ್ಚು ಸೇವೆ ಮಾಡಲಿದ್ದೇನೆ” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸನ್ಮಾನಿಸಿದರು.
ಹಿಂಡಲಗಾ ಜಯನಗರದಲ್ಲಿ..
ಇದೇ ವೇಳೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಜಯನಗರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಿಡುಗಡೆಯಾದ 32 ಲಕ್ಷ ರೂ. ನೂತನ ಉದ್ಯಾನ ನಿರ್ಮಾಣ ಕಾಮಗಾರಿಗೆ ಲಕ್ಷ್ಮೀ ಹೆಬ್ಬಾಳಕರ ಭೂಮಿ ಪೂಜೆ ನೆರವೇರಿಸಿದರು.
ಈ ಉಭಯ ಕಾರ್ಯಕ್ರಮಗಳಲ್ಲಿ ಸ್ಥಳೀಯ ನಿವಾಸಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಕಪಿಲ ಸಾಂಬ್ರೇಕರ್, ಸಂಜಯ ಕದಂ, ರಾಹುಲ್ ಉರಣಕರ್, ಚಂದ್ರಕಾಂತ ಗವಿಮಠ, ಸಂಜಯ ಮಗದುಮ್, ದಯಾನಂದ ಸರ್ನೋಬತ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾನಗರದ ಕೋ ಆಪರೇಟಿವ್ ಹೌಸಿಂಗ್ ಕಾಲೋನಿಯಲ್ಲಿ..
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ವಿದ್ಯಾನಗರದ ಕೋ ಆಪರೇಟಿವ್ ಹೌಸಿಂಗ್ ಕಾಲೋನಿಯಲ್ಲಿ 42 ಲಕ್ಷ ರೂ. ವೆಚ್ಚದಲ್ಲಿ ನೂತನ ಉದ್ಯಾನ ಉದ್ಯಾನ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಎಸ್.ಎಸ್.ಪಾಟೀಲ, ರವಿ ಪಾಟೀಲ, ಭಾಸ್ಕರ ವನ್ನೂರಕರ್, ಅಮರ ಘೋರ್ಪಡೆ, ರಾಜು ಪಾದಗುರಿ, ಸುಧೀರ್ ಕಾಕತ್ಕರ್, ಮನೋಹರ ಗುಂಡೋಜಿ, ಸುರೇಶ ರೊಟ್ಟಿ, ಸತೀಶ ಬೊಡಮಟ್ಟಿ, ವಿಜಯ ಹಿರೇಬಾಳ, ಅಶೋಕ ಕುಂಬಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ