Latest

*ಹೂಗುಚ್ಛ ನೀಡಲು ಬಂದ ಯಡಿಯೂರಪ್ಪಗೆ ಅಮಿತ್ ಶಾ ಶಾಕ್; BJPಯಲ್ಲಿ ದೊಡ್ಡ ಸಂಚಲನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದು ಈ ವೇಳೆ ಕೆಲ ಅಚ್ಚರಿ ಘಟನೆಗಳು ನಡೆದಿವೆ. ಅಮಿತ್ ಶಾ ನಡೆ ರಾಜ್ಯ ಕೇಸರಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.

Home add -Advt

ಯಡಿಯೂರಪ್ಪ ನಿವಾಸದಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಉಪಹಾರ ಕೂಟ ಆಯೋಜಿಸಲಾಗಿತ್ತು. ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಲು ಬಿ.ಎಸ್.ವೈ ಮುಂದಾದರು. ಈ ವೇಳೆ ಅಮಿತ್ ಶಾ, ಹೂಗುಚ್ಛವನ್ನು ಬಿ.ವೈ.ವಿಜಯೇಂದ್ರಗೆ ಕೊಡಿ ಎಂದು ಖುದ್ದು ಸೂಚಿಸಿದರು. ಅಮಿತ್ ಶಾ ಸೂಚನೆಗೆ ಸ್ವತ: ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಹಾಗೂ ಅಲ್ಲಿದ್ದ ಬಿಜೆಪಿ ನಾಯಕರು ಅಚ್ಚರಿಗೊಳಗಾದರು. ತಕ್ಷಣ ಯಡಿಯೂರಪ್ಪ ತಮ್ಮ ಕೈಲಿದ್ದ ಹೂಗುಚ್ಛವನ್ನು ವಿಜಯೀಂದ್ರಗೆ ನೀಡಿದರು. ವಿಜಯೇಂದ್ರ ಅಮಿತ್ ಶಾ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ ಅಮಿತ್ ಶಾ ವಿಜಯೇಂದ್ರ ಅವರ ಬೆನ್ನು ತಟ್ಟಿ ಪ್ರತ್ಸಾಹಿಸಿದರು.

ಅಮಿತ್ ಶಾ ನಡೆ ಕಂಡು ಮಾಜಿ ಸಿಎಂ ಯಡಿಯೂರಪ್ಪಗೆ ಸಂಭ್ರಮ… ವಿಜಯೇಂದ್ರಗೂ ಸಂತೋಷ. ಬಳಿಕ ಯಡಿಯೂರಪ್ಪ ಪ್ರತ್ಯೇಕವಾಗಿ ಇನ್ನೊಂದು ಹೂಗುಚ್ಛವನ್ನು ಅಮಿತ್ ಶಾ ಅವರಿಗೆ ನೀಡಿ ಬರಮಾಡಿಕೊಂಡರು. ಅಮಿತ್ ಶಾ ಅವರ ನಡೆ ಚುನಾವಣೆ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ

https://pragati.taskdun.com/siddaramaiahattackcongress-workervidhanasabha-election/

Related Articles

Back to top button