ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮೇ 10ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ರಾಷ್ಟ್ರೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಭಾರತೀಯ ಜನತಾ ಪಾರ್ಟಿ ಕೋರ್ ಕಮಿಟಿ ಸಭೆ ಶನಿವಾರ ಬೆಂಗಳೂರಿನಲ್ಲಿ ನಡೆಯಲಿದೆ. ಸಭೆಯಲ್ಲಿ ಅಂತಿಮ ಸುತ್ತಿನ ಚರ್ಚೆ ನಡೆಯಲಿದ್ದು, ಏಪ್ರಿಲ 9 -10ರ ಹೊತ್ತಿಗೆ ಅಭ್ಯರ್ಥಿಗಳ ಘೋಷಣೆಯಾಗಬಹುದು.
ಕಾಂಗ್ರೆಸ್ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನುಳಿದ 9 ಕ್ಷೇತ್ರಗಳಿಗೆ ಇನ್ನು 4 -5 ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ.
ಬಾಕಿ ಇರುವ ಕ್ಷೇತ್ರಗಳ ಲೇಟೆಸ್ಟ್ ಮಾಹಿತಿ ಇಲ್ಲಿದೆ:
- ಬೆಳಗಾವಿ ಉತ್ತರ: ಆಸೀಫ್ (ರಾಜು) ಸೇಠ್ ಅಥವಾ ಅಜೀಂ ಪಟವೇಗಾರ್
- ಬೆಳಗಾವಿ ದಕ್ಷಿಣ : ಪ್ರಭಾವತಿ ಚಾವಡಿ
- ಗೋಕಾಕ: ಮಹಾತೇಶ ಕಡಾಡಿ/ ಚಂದ್ರಶೇಖರ ಕೊಣ್ಣೂರು
- ಕಿತ್ತೂರು : ಬಾಬಾಸಾಹೇಬ ಪಾಟೀಲ
- ಸವದತ್ತಿ: ವಿಶ್ವಾಸ ವೈದ್ಯ
- ಅರಬಾವಿ: ಭೀಮಪ್ಪ ಗಡಾದ
- ನಿಪ್ಪಾಣಿ: ಕಾಕಾಸಾಹೇಬ ಪಾಟೀಲ
- ರಾಯಬಾಗ : ಶಂಭು ಕಲ್ಲೋಳಕರ/ ಮಹಾವೀರ ಮೋಹಿತೆ
- ಅಥಣಿ: ಧರೆಪ್ಪ ಟಕ್ಕಣ್ಣವರ್/ ಅಚ್ಛರಿಯ ಅಭ್ಯರ್ಥಿ
ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ನೂರಕ್ಕೆ ನೂರರಷ್ಟು ಪ್ರಗತಿವಾಹಿನಿ ಪ್ರಕಟಿಸಿದ್ದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಹೆಸರುಗಳೇ ಘೋಷಣೆಯಾಗಿವೆ.
ಈಗ ಎರಡನೇ ಪಟ್ಟಿ ಪ್ರಕಟವಾಗಬೇಕಿದ್ದು, ಗೋಕಾಕ ಕ್ಷೇತ್ರದಲ್ಲಿ ಚಂದ್ರಶೇಖ ಕೊಣ್ಣೂರು ಮತ್ತು ಮಹಾಂತೇಶ ಕಡಾಡಿ- ಇಬ್ಬರ ಮಧ್ಯೆ ಪೈಪೋಟಿ ಮುಂದುವರಿದಿದೆ. ಯಾರೇ ಅಭ್ಯರ್ಥಿಯಾರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಹೈಕಮಾಂಡ್ ಮನವೊಲಿಸಿದೆ. ಬೆಳಗಾವಿ ಉತ್ತರದ ಕಣದಿಂದ ಫಿರೋಜ್ ಸೇಠೆ ಹಿಂದೆ ಸರಿದಿದ್ದು, ಸಹೋದರ ರಾಜು ಸೇಠ್ ಹೆಸರನ್ನು ಹೇಳಿದ್ದಾರೆ. ಅಜೀಂ ಪಟವೇಗಾರ್ ಹೆಸರು ಸಹ ಪೈಪೋಟಿಯಲ್ಲಿದೆ.
ರಾಯಬಾಗದಲ್ಲಿ ಶಂಭು ಕಲ್ಲೋಳಿಕರ್ ಮತ್ತು ಮಹಾವೀರ ಮೋಹಿತೆ ಇಬ್ಬರ ಮಧ್ಯೆ ಪೈಪೋಟಿ ಇದೆ. ಅಥಣಿಯಲ್ಲಿ ಧರೆಪ್ಪ ಠಕ್ಕಣ್ಣವರ್ ಹೆಸರು ಮುಂಚೂಣಿಯಲ್ಲಿದೆ. ಬಿಜೆಪಿ ಬೆಳವಣಿಗೆ ಆಧರಿಸಿ ಬದಲಾವಣೆಯಾದರೂ ಅಚ್ಛರಿಯಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ