Kannada NewsLatest

*BJPಯ 44 ನೇ ಸಂಸ್ಥಾಪನಾ ದಿನ; ಕಿರಣ್ ಜಾಧವ್ ಕಾರ್ಯಾಲಯದಲ್ಲಿ ಧ್ವಜಾರೋಹಣ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಾರತೀಯ ಜನತಾ ಪಾರ್ಟಿಯ 44 ನೇ ಸಂಸ್ಥಾಪನಾ ದಿನದ ಅಂಗವಾಗಿ ಬೆಳಗಾವಿಯ ಗೂಡ್‌ಶೆಡ್ ರಸ್ತೆಯಲ್ಲಿರುವ ಬಿಜೆಪಿ ಕರ್ನಾಟಕ ರಾಜ್ಯ ಒಬಿಸಿ ಯುವ ಮೋರ್ಚಾದ ಕಾರ್ಯದರ್ಶಿ ಕಿರಣ್ ಜಾಧವ್ ಅವರ ಸಂಪರ್ಕ ಕಾರ್ಯಾಲಯದಲ್ಲಿ ಎಲ್ಲ ಮರಾಠ ಸಮಾಜದ ಮುಖಂಡರು ಸೇರಿ ಧ್ವಜಾರೋಹಣ ಮಾಡಲಾಯಿತು.


ಈ ಸಂದರ್ಭದಲ್ಲಿ ಕಿರಣ್ ಜಾಧವ್ ಅವರು ಮಾತನಾಡಿ, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಮತ್ತು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ತ್ಯಾಗ, ಸಮರ್ಪಣೆ, ದೇಶ ಸೇವೆಗೆ ಎಲ್ಲರೂ ಮುಂದಾಗಬೇಕು. ಭಾರತೀಯ ಜನತಾಪಾರ್ಟಿ ಇಂದು ಭಾರತ ದೇಶದ ಪ್ರತಿಯೊಬ್ಬ ನಾಗರೀಕರು ಹೆಮ್ಮೆ ಪಡುವ ಕೆಲಸ ಮಾಡಿದೆ. ದೇಶ ಮೊದಲು ಎಂಬುದು ಬಿಜೆಪಿಯ ಎಲ್ಲ ಕಾರ್ಯಕರ್ತರು ಅರಿತಿದ್ದಾರೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವ ಹಾಗೆ ಮಾಡಿದ್ದು ಬಾರತೀಯ ಜನತಾ ಪಕ್ಷದ ಸರ್ಕಾರದ ಆಡಳಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Home add -Advt

ಈ ಸಂದರ್ಭದಲ್ಲಿ ಕೇದಾರ ಘಸರಿ, ರಾಜನ್ ಜಾಧವ, ರಮೇಶ ಪಾಟೀಲ, ಶಂಕರ ಹುಲಮನಿ, ಅನಂತ ಕರೋಶಿ, ಚೇತನ್ ನಂದಗಡಕರ, ಶಿವುಕುಮಾರ ಮಲಕ್ಕನವರ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

https://pragati.taskdun.com/karnatakaheavy-rainupdateaprill-8th/

Related Articles

Back to top button