Karnataka NewsLatestUncategorized

ಮಾರಿಹಾಳ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ (೧೮/೦೫/೨೦೨೩) ರಾತ್ರಿ ಮಾರಿಹಾಳ ಗ್ರಾಮದಲ್ಲಿ ನಡೆದ ಮರ್ಡರ್ ಕೇಸ್ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಾಂತೇಶ ರುದ್ರಪ್ಪಾ ಕರಲಿಂಗನ್ನವರ (೨೩) ಸಾ: ಮಾರಿಹಾಳ ಈತನ ಕೊಲೆಯಾದ ಬಗ್ಗೆ ಮೃತನ ಅಣ್ಣ ಸಂತೋಷ ನೀಡಿದ ದೂರಿನಂತೆ ದಿನಾಂಕ.೧೯/೦೫/೨೦೨೩ ರಂದು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

Home add -Advt

ಮಾರ್ಕೆಟ್ ಎಸಿಪಿ ಪ್ರಶಾಂತ ಸಿದ್ದನಗೌಡರ ಉಸ್ತುವಾರಿ ಮತ್ತು ಮಾರಿಹಾಳ ಠಾಣೆ ಪಿಐ ಚಂದ್ರಶೇಖರ ತಿಗಡಿ ಇವರ ನೇತೃತ್ವದಲ್ಲಿ ಮಾರಿಹಾಳ ಠಾಣೆಯ ಸಿಬ್ಬಂದಿಯ ತಂಡ ಕೊಲೆ ಆರೋಪಿಗಳಾದ
೧] ಅಕ್ಷಯಕುಮಾರ ನಾಗಪ್ಪಾ ಕೊಣಕೇರಿ (೨೩), ಸಾ||ಸುಳೇಭಾವಿ
೨] ರಾಜೇಸಾಬ್ ಹನೀಫ್ ಮುಲ್ಲಾ (೨೩) ಸಾ|| ಮಾರಿಹಾಳ ಎಂಬಿಬ್ಬರನ್ನು ಬಂಧಿಸಿದೆ.

ವಿಚಾರಣೆ ಕೈಗೊಂಡು, ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪಿತರನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದ ಮಾರಿಹಾಳ ಪೊಲೀಸ್ ಠಾಣೆಯ ಪಿಐ ಮತ್ತು ಸಿಬ್ಬಂದಿ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಶ್ಲಾಘಿಸಿದ್ದಾರೆ.

https://pragati.taskdun.com/belagavi-youth-hacked-to-death-with-weapons/

Related Articles

Back to top button