Latest

ಸ್ನೇಹಿತನ ಚಿತೆಗೆ ಹಾರಿ ಪ್ರಾಣ ಬಿಟ್ಟ ಜೀವದ ಗೆಳೆಯ

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಹಿಂದೆಲ್ಲ ಅನೇಕ ಸತಿಯರು ಪತಿ ಮೃತಪಟ್ಟಾಗ ಆತನ ಚಿತೆಗೆ ಹಾರಿ ಆತ್ಮಾಹುತಿ ಗೈದು ‘ಮಹಾಸತಿ’ಯಾಗುತ್ತಿದ್ದುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಕ್ಯಾನ್ಸರ್ ನಿಂದ ಮೃತಪಟ್ಟ ತನ್ನ ಸ್ನೇಹಿತನ ಚಿತೆಗೆ ಹಾರಿ ಪ್ರಾಣ ತ್ಯಜಿಸಿದ್ದಾರೆ.

ಅಶೋಕ (42) ಎಂಬ ವ್ಯಕ್ತಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಯಮುನಾ ನದಿ ತಟದಲ್ಲಿ ನಡೆಯುತ್ತಿತ್ತು. ಈ ವೇಳೆ ಅಶೋಕ ಅವರ ಆತ್ಮೀಯ ಗೆಳೆಯ ಆನಂದ (40) ಕೂಡ ಅಲ್ಲಿದ್ದರು. ಚಿತೆಗೆ ಅಗ್ನಿ ಸ್ಪರ್ಷಿಸಿ ಅದು ಉರಿಯುತ್ತಿದ್ದಂತೆ ಎಲ್ಲರೂ ಅಲ್ಲಿಂದ ನಿರ್ಗಮಿಸುವ ವೇಳೆ ಆನಂದ ಅವರು ಅದೇ ಚಿತೆಗೆ ಹಾರಿದ್ದಾರೆ.

Home add -Advt

ಇದನ್ನು ಕಂಡು ಅಶೋಕ ಅವರ ಶವಸಂಸ್ಕಾರಕ್ಕೆ ಬಂದವರು ಅವರನ್ನು ಚಿತೆಯಿಂದ ಹೊರ ತೆಗೆದು ಆಗ್ರಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದರಾದರೂ ಅಲ್ಲಿ ತೀವ್ರ ಸುಟ್ಟ ಗಾಯಗಳಿಂದ ಅವರು ಅಸು ನೀಗಿದ್ದಾಗಿ ವೈದ್ಯರು ಘೋಷಿಸಿದರು.

https://pragati.taskdun.com/prime-minister-modi-inaugurated-the-new-parliament-house/

https://pragati.taskdun.com/project-exhibition-2023-at-kls-git/

Related Articles

Back to top button