Kannada NewsKarnataka NewsLatest
*ಸುತ್ತಿಗೆಯಿಂದ ಹೊಡೆದು ಇಬ್ಬರು ಪುಟ್ಟ ಮಕ್ಕಳನ್ನೇ ಕೊಂದ ಕಟುಕ ತಂದೆ*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಇಬ್ಬರು ಪುಟ್ಟ ಮಕ್ಕಳನ್ನೇ ತಂದೆಯೊಬ್ಬ ಸುತ್ತಿಗೆಯಿಂದ ಹೊಡೆದು ಕೊಂದಿರುವ ಘೋರ ಕೃತ್ಯ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ನಡೆದಿದೆ.
ಶ್ರೀಕಾಂತ್ ಮಕ್ಕಳನ್ನೇ ಕೊಂದ ತಂದೆ. 3 ವರ್ಷದ ಆದಿತ್ಯ, 4 ವರ್ಷದ ಅಮೂಲ್ಯ ತಂದೆಯಿಂದಲೇ ಹತ್ಯೆಯಾದ ಮಕ್ಕಳು. ಪತ್ನಿ ಲಕ್ಷ್ಮೀ ಮೇಲೆಯೂ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರ್ಗಿಯಿಂದ ಬಂದಿದ್ದ ಕುಟುಂಬ ಮರಳಗಾಲದ ಆಲೆಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



