*ದಾಖಲೆ ಕೊಡಲು ಸಿದ್ದ ತನಿಖೆ ನಡೆಸುವ ಧಮ್ ಇದೆಯೇ?; ಆ ಮಂತ್ರಿ ವಜಾ ಮಾಡುವ ತಾಕತ್ ನಿಮಗಿದೆಯೇ?; ಮತ್ತೆ ಗುಡುಗಿದ HDK*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರ ಆರೋಪ ಮಾಡಿದ್ದ ಕಾಂಗ್ರೆಸ್ ನವರಿಗೆ ಒಂದೇ ಒಂದು ದಾಖಲೆ ಕೊಡುವ ಯೋಗ್ಯತೆ ಇರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸಿಎಂ ಗೃಹ ಕಚೇರಿಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಕಮಿಷನ್ ದಂಧೆ ನಡೆದಿದೆ ಎಂಬ ತಮ್ಮ ಆರೋಪಕ್ಕೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಸರ್ಕಾರವಿದ್ದಾಗ ಎರಡು ವರ್ಷ ಕಾಂಗ್ರೆಸ್ ನವರು ನಿರಂತರ ಹೋರಾಟ ಮಾಡಿದರು, ಭ್ರಷ್ತಾಚಾರ ಆರೊಪಕ್ಕೆ ದಾಖಲೆ ಕೊಡಿ ಎಂದರೆ ಕೊಡಲು ಸಾಧ್ಯವಾಗಲಿಲ್ಲ. ಈಗ ನಾನು ಮಾಡಿದ ಆರೊಪಕ್ಕೆ ಕೆಲ ಸಚಿವರು ದಾಖಲೆ ಕೇಳುತ್ತಿದ್ದಾರೆ. ದಾಖಲೆ ಕೊಡಲು ನಾನು ಸಿದ್ಧ ಎಂದರು.
ಅಧಿಕಾರಕ್ಕೆ ಬಂದು ಒಂದುವರೆ ತಿಂಗಳಿಗೆ ಕಾಂಗ್ರೆಸ್ ನಿಂದ ಹಗಲು ದರೋಡೆ ನಡೆಯುತ್ತಿದೆ. ವರ್ಗಾವಣೆ ದಂಧೆಗೆ ಎಷ್ಟು ಹಣ ನಿಗದಿ ಮಾಡಿದ್ದೀರಿ ಎಂಬುದು ನನಗೆ ಗೊತ್ತಿದೆ.ಎಲ್ಲವನ್ನು ದಾಖಲೆ ನೀಡುತ್ತೇನೆ. ಸಮಯ ಬಂದಾಗ ಸದನದಲ್ಲಿಯೇ ದಾಖಲೆ ಕೊಡುತ್ತೇನೆ. ನಾನು ದಾಖಲೆ ಕೊಟ್ಟರೆ ಇವರಿಗೆ ತನಿಖೆ ಮಾಡುವ ಧಮ್ ಇದೆಯೇ? ಯಾವ ಮಂತ್ರಿ ಅಡಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ದಾಖಲೆ ಸಮೇತ ಕೊಟ್ಟರೆ ಆ ಮಂತ್ರಿಯನ್ನು ವಜಾಗೊಳಿಸುವ ತಾಕತ್ತು ಇವರಿಗೆದೆಯೇ? ವಜಾ ಮಾಡುತ್ತೀರೇ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ