ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಹುಕ್ಕೇರಿ ನಗರದ ಬಸ್ ನಿಲ್ದಾಣ ರಸ್ತೆಯ ಎ ಟಿ ಎಮ್ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಜರುಗಿದೆ.
ಪಟ್ಟಣದ ಹೋಸ ಬಸ್ ನಿಲ್ದಾಣ ಹತ್ತಿರ ಖಸಾಯಿ ಖಾನಾ ರಸ್ತೆಯಲ್ಲಿ ಇಂಡಿಯಾ ಎ ಟಿ ಎಮ್ ಗೆ ಆಕಸ್ಮಿಕ ಬೆಂಕಿ ತಗುಲಿ ಹೋತ್ತಿ ಉರಿದಿದೆ. ಸ್ಥಳಿಯರು ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿ ಸಿಬ್ಬಂದಿಗಳು ಬರುವಷ್ಟರಲ್ಲಿ ಎ ಟಿ ಎಮ್ ಮತ್ತು ಅದರಲ್ಲಿನ ಹಣ ಸುಟ್ಟು ಕರಕಲಾಗಿದೆ.
ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಹೇಳಲಾಗುತ್ತಿದೆ. ಅದರಲ್ಲಿ ಎಷ್ಟು ಹಣ ಹಾನಿಯಾಗಿದೆ ಎಂಬುದನ್ನು ಪೋಲಿಸರ ತನಿಖೆಯಿಂದ ಗೊತ್ತಾಗಬೇಕಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ