Kannada NewsKarnataka NewsLatestUncategorized

*ಜಿ-ನೆಟ್ ಕಂಪನಿ ಮಾಲೀಕ, ಆಮ್ ಆದ್ಮಿ ಪಕ್ಷದ ಮುಖಂಡ ಅರುಣ್ ಕುಮಾರ್ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ-ನೆಟ್ ಮುಖ್ಯಸ್ಥ, ಆಪ್ ಮುಖಂಡ ಅರುಣ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇಂಟರ್ ನೆಟ್ ಬ್ರಾಡ್ ಬ್ಯಾಂಡ್ ಕಂಪನಿ ಏರೋನಿಕ್ಸ್ ಇಂಟರ್ ನೆಟ್ ಕಂಪನಿಯ ಎಂಡಿ ಹಾಗೂ ಸಿಇಒ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ಮುಖಂಡನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Related Articles

ಏರೋನಿಕ್ಸ್ ಇಂಟರ್ ನೆಟ್ ಕಂಪನಿಯ ಎಂಡಿ ಫಣೀಂದ್ರ, ಸಿಇಒ ವಿನುಕುಮಾರ್ ಕೊಲೆಗೆ ಜಿ ನೆಟ್ ಮಾಲೀಕ ಅರುಣ್ ಕುಮಾರ್ ಜೋಕರ್ ಫಿಲೆಕ್ಸ್ ಗೆ ಸುಪಾರಿ ನೀಡಿದ್ದ ಎಂದು ಹೇಳಲಾಗುತ್ತಿದೆ. ಪೊಲೀಸರ ವಿಚಾರಣೆ ವೇಳೆ ಈ ವಿಚಾರವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಿ ನೆಟ್ ಮಾಲೀಕ, ಆಪ್ ಮುಖಂಡನೂ ಆಗಿರುವ ಅರುಣ್ ಕುಮಾರ್ ನನ್ನು ಬಂಧಿಸಲಾಗಿದೆ.

Home add -Advt

Related Articles

Back to top button