ಬೆಂಗಳೂರು ಅರಮನೆಯಲ್ಲಿ ಹುಕ್ಕೇರಿ ಶ್ರೀಗಳಿಗೆ ಸನ್ಮಾನ
ಪ್ರಗತಿವಾಹಿನಿ ಸುದ್ದಿ – ಬೆಂಗಳೂರು : ಬೆಂಗಳೂರಿನ ಅರಮನೆಯ ಕಾರ್ಯಕ್ರಮದಲ್ಲಿ ಶ್ರೀಮದ್ ರಂಭಾಪುರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡುತ್ತಾ ಗಡಿಭಾಗದಲ್ಲಿ ಕನ್ನಡದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಮಠ ಹುಕ್ಕೇರಿಯ ಹಿರೇಮಠ. ಗುರು ವಿರಕ್ತರ ನಡುವೆ ಸೇತುವೆಯಾಗಿ ನಿಂತು ಕಾರ್ಯವನ್ನ ಮಾಡುತ್ತಿರುವ ಮಠ ಹುಕ್ಕೇರಿ ಹಿರೇಮಠ.
ಸರ್ವ ಜನಾಂಗದವರನ್ನು ಪ್ರೀತಿಯಿಂದ ಕಾಣುತ್ತಿರುವ ಮಠ ಹುಕ್ಕೇರಿ ಹಿರೇಮಠ. ಈ ಮಠ ರಂಭಾಪುರಿ ಪೀಠದ ಶಾಖಾ ಮಠ ಎಂದು ಹೇಳಲು ಅತೀವ ಸಂತೋಷವಾಗುತ್ತದೆ. ಇವರ ನಿರಂತರ ಶ್ರಮ ಇವತ್ತು ನಾಡು ಅಷ್ಟೇ ಅಲ್ಲ ದೇಶ ಹೊರದೇಶಗಳಲ್ಲಿ ಕೂಡ ಜನ ಮೆಚ್ಚುಗೆಯನ್ನು ಪಡೆಯುತ್ತಿದೆ. ಯುವ ಸ್ವಾಮಿಗಳು ಇಂಥ ಕಾರ್ಯವನ್ನು ನಿರಂತರವಾಗಿ ಮಾಡಲಿ ಎಂದು ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್ ಕಲ್ಲೂರ್ ಅವರು ಮಾತನಾಡಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ನಮ್ಮ ವೇದಿಕೆಯಿಂದ ನಡೆಯುತ್ತಿರುವ ಅರಮನೆ ಮೈದಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮಗೆಲ್ಲ ಸ್ಫೂರ್ತಿಯಾಗಿ ನಿಂತಿದ್ದಾರೆ. ನಮ್ಮ ವೇದಿಕೆಗೆ ನಿರಂತರವಾಗಿ ಹರಸುತ್ತ ಬಂದಿರುವ ಶ್ರೀಗಳನ್ನು ಸನ್ಮಾನಿಸುತ್ತಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಭಾರತವನ್ನು ಇಡೀ ದೇಶ ವಿಶ್ವಗುರು ಎಂದು ಸ್ವೀಕರಿಸಿದೆ. ನಾವೆಲ್ಲರು ಈ ದೇಶದ ಸಂಸ್ಕ್ರತಿಗೆ, ಈ ದೇಶದ ಆಧ್ಯಾತ್ಮ ಶಕ್ತಿಗೆ ತಲೆಬಾಗಬೇಕು. ಆ ಕಾರ್ಯವನ್ನು ನಿರಂತರವಾಗಿ ಮಾಡುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಬೆಂಗಳೂರಿನ ಮೆಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ವೀರಶೈವ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರಾದ ಪರಮಶಿವಯ್ಯನವರು, ಕರ್ನಾಟಕ, ಮಹಾರಾಷ್ಟ್ರದಿಂದ ಆಗಮಿಸಿರುವ ಒಂದು 150 ಕ್ಕೂ ಹೆಚ್ಚು ಸ್ವಾಮಿಗಳು ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ