Kannada NewsKarnataka NewsLatest

*ಜೈಲಿನ ಗೋಡೆ ಜಿಗಿದು ಪರಾರಿಯಾದ ಅತ್ಯಾಚಾರ ಆರೋಪಿ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಆರೋಪಿಯೊಬ್ಬ ಜೈಲಿನಿಂದ ಪರಾರಿಯಾಗಿರುವ ಘಟನೆ ದಾವಣಗೆರೆ ನಗರದ ಉಪಕಾರಾಗೃಹದಲ್ಲಿ ನಡೆದಿದೆ.

23 ವರ್ಷದ ವಸಂತ್ ಜೈಲಿನಿಂದ ತಪ್ಪಿಸಿಕೊಂಡಿರುವ ಆರೋಪಿ. ಉಪಕಾರಾಗೃಹದ ಗೋಡೆ ಮೇಲಿನಿಂದ ಜಿಗಿದು ಆರೋಪಿ ಪರಾರಿಯಾಗಿದ್ದಾನೆ.

Home add -Advt

ಜೈಲಿನಿಂದ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೈಲಿನ ಗೋಡೆ ಮೇಲಿನಿಂದ ಜಿಗಿದ ಆರೋಪಿ ಯಾರೂ ಬಾರದಿರುವುದನ್ನು ಕಂಡು ನಿಧಾನವಾಗಿ ಎದ್ದುನಿಂತು ಕುಂಟುತ್ತಲೇ ರಸ್ತೆಯಲ್ಲಿ ಓಡಿ ಪರಾರಿಯಾಗಿದ್ದಾನೆ.

ದಾವಣಗೆರೆಯ ಕರೂರ ಪ್ರದೇಶದ ನಿವಾಸಿಯಾಗಿದ್ದ ವಸಂತ್ ವೃತ್ತಿಯಿಂದ ಆಟೋ ಚಾಲಕ. ದಾವಣಗೆರೆ ಮಹಿಳಾ ಠಾಣೆಯಲ್ಲಿ ವಸಂತ್ ವಿರುದ್ಧ ಅತ್ಯಾಚರ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಜೈಲಿನ ಅಧಿಕಾರಿಗಳು, ಸಿಬ್ಬಂದಿಗಳ ನಿರ್ಲಕ್ಷಕ್ಕೆ ಹಾಡಹಗಲೇ ನಿನ್ನೆ ಮಧ್ಯಾಹ್ನ ಉಪಕಾರಾಗೃಹದ ಜೈಲಿನ ಗೋಡೆ ಹತ್ತಿ ಜಿಗಿದು ಆರೋಪಿ ಪರಾರಿಯಾಗಿದ್ದಾನೆ.

Related Articles

Back to top button