Kannada NewsKarnataka NewsLatest

*ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಹಾರಾಟ ಆರಂಭ; ಮೊದಲ ವಿಮಾನದಲ್ಲಿ ಮಾಜಿ ಸಿಎಂ, ಸಚಿವರು, ಸಂಸದ, ಶಾಸಕರು ಪ್ರಯಾಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಇಂದಿನಿಂದ ಮೊದಲ ವಿಮಾನ ಹಾರಾಟ ಆರಂಭವಾಗಿದೆ. 72 ಸೀಟ್ ಗಳ ಇಂಡಿಗೋ ವಿಮಾನ ಇಂದು ಬೆಳೆಗ್ಗೆ ಮೊದಲ ಹಾರಾಟ ನಡೆಸಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಂಡಿಗೋ ಮೊದಲ ವಿಮಾನ ಹಾರಾಟ ನಡೆಸಿದೆ. ಕೆಐಎ ನಿಂದ ಬೆಳಿಗ್ಗೆ 9:45ಕ್ಕೆ ಇಂಡಿಗೋ ವಿಮಾನ ಹಾರಾಟ ನಡೆಸಿದ್ದು, 11 ಗಂಟೆ ವೇಳೆಗೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿದೆ.

Home add -Advt

ಮೊದಲ ವಿಮಾನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್, ಶಾಸಕರಾದ ಅರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ ಕೆ.ಎಸ್.ಈಶ್ವರಪ್ಪ,ಸಂಸದ ಬಿ.ವೈ.ರಾಘವೇಂದ್ರ ಪ್ರಯಾಣಿಸಿದ್ದಾರೆ. ಈ ಮೂಲಕ ಬೆಂಗಳೂರು-ಶಿವಮೊಗ್ಗ ನಡುವೆ ಇಂದಿನಿಂದ ವಿಮಾನ ಹಾರಾಟ ಆರಂಭವಾಗಿದ್ದು, ಮಲೆನಾಡಿನ ಜನರ ಹಲವು ವರ್ಷಗಳ ಕನಸು ನನಸಾದಂತಾಗಿದೆ.

Related Articles

Back to top button