Kannada NewsKarnataka NewsLatest

ಸಪ್ತಪದಿ ತುಳಿದ ಮೂರು ತಿಂಗಳಲ್ಲೇ ಇಹಲೋಕ ತ್ಯಜಿಸಿದ ಯುವತಿ; ಪತಿ ಮೇಲೆ ಪ್ರಕರಣ ದಾಖಲು

ಬೆಂಗಳೂರು: ಮೂರು ತಿಂಗಳ ಹಿಂದಷ್ಟೇ ಸಂಭ್ರಮದಿಂದ ಸಪ್ತಪದಿ ತುಳಿದಿದ್ದ ಯುವತಿಯೊಬ್ಬರು ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣವೇಣಿ (26) ಆತ್ಮಹತ್ಯೆ ಮಾಡಿಕೊಂಡವರು. ಅವರು ಮೂರು ತಿಂಗಳ ಹಿಂದೆ ಕೋಲಾರ ಮೂಲದ ಪೃಥ್ವಿರಾಜ್ (30 ) ಅವರೊಂದಿಗೆ ಮದುವೆಯಾಗಿದ್ದರು. ಪೃಥ್ವಿರಾಜ್​ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೌಟುಂಬಿಕ ವಿಚಾರದಲ್ಲಿ ಪೃಥ್ವಿರಾಜ್ ಅವರೇ ಪತ್ನಿಯ ಕತ್ತು ಹಿಸುಕಿ ಕೊಲೆಗೈದು ನಂತರ ನೇಣು ಬಿಗಿದಿದ್ದಾರೆ ಎಂದು ಕೃಷ್ಣವೇಣಿ ಕುಟುಂಬಸ್ಥರಯ ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button