ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿ ಶಿಕ್ಷಕರ ನೇಮಕ: ಅರ್ಜಿ ಅಹ್ವಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೦೨೩-೨೪ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ೧೨ ಪ್ರಾಥಮಿಕ ಶಾಲಾ ಸಮನ್ವಯ ಶಿಕ್ಷಣ ಸಂಪನ್ಮೂಲ (BIERT) ಶಿಕ್ಷಕರ ಒಟ್ಟು ೧೨ ಖಾಲಿ ಹುದ್ದೆಗಳಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.
ಸದರಿ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇರಗುತ್ತಿಗೆ ಮೂಲಕ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲು ವಿಶೇಷ ಡಿ.ಎಡ್ ವಿದ್ಯಾರ್ಹತೆ ಹಾಗೂ RT ಅನುಮೊದಿತ ವಿದ್ಯಾರ್ಹತೆ ಹೊಂದಿರುವ ಹಾಗೂ RI-RR ಸಂಖ್ಯೆ ಹೊಂದಿರುವ ಅರ್ಹ ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಸೆ.೧೫ ೨೦೨೩ ರಂದು ಸಂಜೆ ೫ ಗಂಟೆಯೊಳಗಾಗಿ ಉಪನಿರ್ದೇಶಕರ ಆಡಳಿತ ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿರವರ ಕಛೇರಿಗೆ ಸಲ್ಲಿಸಬಹುದಾಗಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಈ ಕಛೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ವಿದ್ಯಾರ್ಹತೆ ಹೊಂದಿದ ದಾಖಲೆಗಳೊಂದಿಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ ೯೪೪೮೯೯೯೪೩೨ ಗೆ ಸಂಪರ್ಕಿಸಬಹುದು ಹಾಗೂ ಕಛೇರಿಗೆ ಖುದ್ದಾಗಿ ಭೇಟಿಯಾಗಿ ಮಾಹಿತಿ ಪಡೆಯಬಹುದಾಗಿದೆ ಎಂದು ಚಿಕ್ಕೋಡಿ ಸಮಗ್ರ ಶಿಕ್ಷಣ ಪದನಿಮಿತ ಆಡಳಿತ ಹಾಗೂ ಸಮನ್ವಯಾಧಿಕಾರಿಗಳು ಯೋಜನಾ ಉಪನಿರ್ದೇಶಕರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ