Kannada NewsLatestNational

*ಹಸುಗೂಸನ್ನೇ ಅಪಾರ್ಟ್ ಮೆಂಟ್ ನಿಂದ ಎಸೆದ ಹೆತ್ತ ತಾಯಿ*

ಪ್ರಗತಿವಾಹಿನಿ ಸುದ್ದಿ; ಮುಂಬೈ: ಹೆತ್ತ ತಾಯಿಯೇ ಹಸುಗೂಸನ್ನು ಅಪಾರ್ಟ್ ಮೆಂಟ್ ಮೇಲಿಂದ ಕೆಳಗೆ ಬಿಸಾಕಿರುವ ಘಟನೆ ಮುಂಬೈ ಉಪನಗರ ಮುಲುಂಡ್ ನಲ್ಲಿ ನಡೆದಿದೆ.

39 ದಿನಗಳ ತನ್ನದೇ ಶಿಶುವನ್ನು ಮಹಿಳೆ ಅಪಾರ್ಟ್ ಮೆಂಟ್ ನ 14 ನೇ ಮಹಡಿಯಿಂದ ಎಸೆದಿದ್ದಾಳೆ. ತನ್ನ ಗಂಡನ ಮನೆಯವರು ತನ್ನನ್ನು ಮನೆಯಿಂದ ಹೊರ ಹಾಕಿದರು ಎಂದು ಮಹಿಳೆ ಮಗುವನ್ನು ಅಪಾರ್ಟ್ ಮೆಂಟ್ ನ ಬಾಲ್ಕನಿಯ ಕಿಡಕಿಯಿಂದ ಎಸೆದಿದ್ದಾಳೆ.

Home add -Advt

ಮಹಿಳೆ ಮಗು ಎಸೆಯುತ್ತಿದ್ದಂತೆ ಮಗುವಿನ ಚಿಕ್ಕಪ್ಪ ತಕ್ಷಣ ಕೆಳಗೋಡಿ ಬಂದು ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿತ್ತು.

ಮಗುವಿನ ತಾಯಿಗೆ ಕಿವಿ ಕೇಳುತ್ತಿರಲಿಲ್ಲ. ಅದೇನೇ ಇದ್ದರೂ 39 ದಿನಗಳ ಹೆತ್ತ ಮಗುವನ್ನೇ ಎಸೆದ ಕ್ರೂರಿ ತಾಯಿ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ಈ ಘಟನೆ ಬೆನ್ನಲ್ಲೇ ಇದೇ ಮಹಿಳೆಯ 7 ತಿಂಗಳ ಮಗು 2022ರಲ್ಲಿ ಊಟ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ. ಪೊಲಿಸರು ಈಗ ಆ ಪ್ರಕರಣದ ತನಿಖೆಗೂ ಮುಂದಾಗಿದ್ದಾರೆ.

Related Articles

Back to top button