Kannada NewsKarnataka NewsLatest

*ASI ಸ್ಕೂಟರ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿ*

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಸಹೋದರರಿಬ್ಬರು ಗಲಾಟೆ ಮಾಡಿಕೊಂಡಿದ್ದಕ್ಕೆ ಬುದ್ಧಿವಾದ ಹೇಳಿದ್ದ ಎಎಸ್ ಐ ಸ್ಕೂಟರ್ ಗೆ ಬೆಂಕಿ ಹಚ್ಚಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವೇಕಾನಂದ ನಗರದಲ್ಲಿ ನಡೆದಿದೆ.

ಸಲೀಂ ಎ ಎಸ್ ಐ ಸ್ಕೂಟರ್ ಗೆ ಬೆಂಕಿ ಹಚ್ಚಿದ ಆರೋಪಿ. ಗುಡಿಬಂಡೆ ಪೊಲೀಸ್ ಠಾಣೆಯ ಎಎಸ್ಐ ನಂಜುಂಡ ಶರ್ಮ ಎಂಬುವವರಿಗೆ ಸೇರಿದ ಸ್ಕೂಟರ್ ಗೆ ಸಲೀಂ ಬೆಂಕಿ ಹಚ್ಚಿದ್ದಾನೆ.

Home add -Advt

ಸಲೀಂ ಹಾಗೂ ಆತನ ಸಹೋದರ ಇಬ್ಬರೂ ಗಲಾಟೆ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಎಎಸ್ ಐ ನಂಜುಂಡ ಶರ್ಮ ಆಸ್ಪತ್ರೆಗೆ ತೆರಳಿ ಇಬ್ಬರಿಗೂ ಬುದ್ಧಿ ಹೇಳಿದ್ದರು.

ಇದೇ ಕಾರಣಕ್ಕೆ ಕೋಪಗೊಂಡು ಸಲೀಂ, ನಂಜುಂಡ ಶರ್ಮ ಅವರ ನಿವಾಸಕ್ಕೆ ತೆರಳಿ, ಅವರ ಸ್ಕೂಟರ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.


Related Articles

Back to top button