Kannada NewsLatestNational

*ಪತ್ನಿಯ ತಲೆ ಕತ್ತರಿಸಿ ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ಪತಿ*

ಪ್ರಗತಿವಾಹಿನಿ ಸುದ್ದಿ; ಭುವನೇಶ್ವರ: ಪತ್ನಿಯನ್ನು ಬರ್ಬರವಾಗಿ ಹತ್ಯೆಗಿದ ಪರಿಮಹಾಶಯ ಬಳಿಕ ರುಂಡವನ್ನು ಕತ್ತರಿಸಿ ಪೊಲೀಸ್ ಠಾಣೆಗೆ ತೆರಳಿ ಶರಣಾದ ಘಟನೆ ಒಡಿಶಾದಲ್ಲಿ ನಡೆದಿದೆ.

ಬಿಡಪಾಜು ಗ್ರಾಮದ ನಿವಾಸಿ ಅರ್ಜುನ್ ಬಾಘಾ ಪತ್ನಿಯನ್ನೇ ಕೊಲೆಗೈದ ಪತಿ. ಧರಿತ್ರಿ (30) ಮೃತ ಮಹಿಳೆ. ಪತ್ನಿ ಮೇಲೆ ಅಕ್ರಮ ಸಂಬಂಧ ಶಂಕೆ ಮೇರೆಗೆ ಅರ್ಜುನ್ ಬಾಗಾ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.

Home add -Advt

ಹತ್ಯೆ ಬಳಿಕ ಹರಿತವಾದ ಆಯುಧದಿಂದ ಪತ್ನಿಯ ಶಿರಚ್ಛೇಧ ಮಾಡಿ ರುಂಡವನ್ನು ಕೈಯಲ್ಲಿ ಹಿಡಿದು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿಯನ್ನು ಕಂಡ ಪೊಲೀಸರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಅರ್ಜುನ್ ಬಾಗಾ ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.


Related Articles

Back to top button