Belagavi NewsBelgaum NewsKannada NewsKarnataka NewsLatestPolitics

*ದತ್ತು ಸ್ವೀಕಾರ ಕೇಂದ್ರದ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ರಾಮತೀರ್ಥ ನಗರದಲ್ಲಿ‌ ಹೊಸದಾಗಿ ಪ್ರಾರಂಭಿಸಿರುವ ಸರ್ಕಾರಿ ದತ್ತು ಸ್ವೀಕಾರ ಕೇಂದ್ರದಲ್ಲಿ ಪ್ರಪ್ರಥಮವಾಗಿ ದಾಖಲಾಗಿರುವ 2 ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾಮಕರಣ ಮಾಡಿದರು.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಭಗವಂತನ ಅನುಗ್ರಹವಿರಲೆಂದು ಒಂದು ಮಗುವಿಗೆ ‘ಶಿವಾ’ ಇನ್ನೊಂದು ಮಗುವಿಗೆ ‘ಗುರು’ ಎಂದು ನಾಮಕರಣ ಮಾಡಲಾಗಿದ್ದು, ಮಕ್ಕಳ ಬಗ್ಗೆ ಕಾಳಜಿವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು‌ ನೀಡಿದ್ದೇನೆ ಎಂದರು.

Home add -Advt

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಉಪ ನಿರ್ದೇಶಕರಾದ ನಾಗರಾಜ್ ಆರ್, ಗಂಗಣ್ಣ ಕಲ್ಲೂರ್, ಮಹಾಂತೇಶ ಮತ್ತಿಕೊಪ್ಪ, ಅಡಿವೇಶ ಇಟಗಿ, ಸಚಿನ ಹಿರೇಮಠ, ಸದ್ದಾಂ ಮಾರಿಹಾಳ, ಲೋಕೇಶ್, ಮಹೇಶ್ ಸಂಗಾನಟ್ಟಿ, ಮಲ್ಲಪ್ಪ ಕುಂದರಂಗಿ ಉಪಸ್ಥಿತರಿದ್ದರು.

Related Articles

Back to top button