Kannada NewsKarnataka NewsLatest

*ತುಂಡುಡುಗೆ ಧರಿಸಿದಳೆಂದು ಪತ್ನಿಯನ್ನೇ ಕೊಲೆಗೈದ ಪತಿ*

ಪ್ರಗತಿವಾಹಿನಿ ಸುದ್ದಿ; ಹಾಸನ: ತುಂಡುಡುಗೆ ಧರಿಸಿದ್ದಾಳೆ ಎಂಬ ಕಾರಣಕ್ಕೆ ಪತ್ನಿಯನ್ನೇ ಪತಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

22 ವರ್ಷದ ಜ್ಯೋತಿ ಕೊಲೆಯಾದ ಮಹಿಳೆ. ಜೀವನ್ ಪತ್ನಿಯನ್ನೇ ಕೊಂದ ಪತಿ. ತನ್ನ ಪತ್ನಿ ತುಂಡು ಬಟ್ಟೆ ಧರಿಸುತ್ತಾಳೆ ಎಂದು ಕೋಪಗೊಂಡಿದ್ದ ಜೀವನ್ ಆಕೆಯೊಂದಿಗೆ ಜಗಳವಾಡಿ ಬಳಿಕ ಆಕೆಯನ್ನೇ ಕೊಲೆಗೈದಿದ್ದಾನೆ.

Home add -Advt

ಧಾರವಾಡ ಮೂಲದ ಜ್ಯೋತಿ ಹಾಗೂ ಜೀವನ್ ಪರಸ್ಪರ ಪ್ರೀತಿಸಿ ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಂಪುರ ನಿವಾಸದಲ್ಲಿ ವಾಸವಾಗಿದ್ದರು. ಜ್ಯೋತಿಗೆ ಮಾಡರ್ನ್ ಬಟ್ಟೆ ಧರಿಸುವುದು, ಸ್ಟೈಲೀಶಾಗಿ ಕಾಣುವುದು ಎಂದರೆ ಇಷ್ಟ. ಆದರೆ ಜೀವನ್ ಗೆ ಇದು ಇಷ್ಟವಾಗುತ್ತಿರಲಿಲ್ಲ. ಬಟ್ಟೆ ವಿಚಾರವಾಗಿಯೇ ಇಬ್ಬರಿಗೂ ಜಗಳವಾಗುತ್ತಿತ್ತು. ನಿನ್ನೆ ಕೂಡ ಜ್ಯೋತಿ ಮಾಡರ್ನ್ ಬಟ್ಟೆ ಧರಿಸಿ ಆಚೆ ಹೊರಟಿದ್ದಳು. ಈ ವೇಳೆ ನಾನೇ ಡ್ರಾಪ್ ಮಾಡುತ್ತೇನೆ ಎಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಜೀವನ್, ಪತ್ನಿಯ ಕತ್ತನ್ನು ಚಾಕುವಿನಿಂದ ಸೀಳಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಅರಸಿಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button