Kannada NewsKarnataka NewsLatest
*ಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು*

ಪ್ರಗತಿವಾಹಿನಿ ಸುದ್ದಿ; ಹಾಸನ: ಮನೆಯೊಂದರಲ್ಲಿ ತಾಯಿ ಹಾಗೂ ಇಬ್ಬರು ಪುಟ್ಟ ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದೆ.
ತಾಯಿ ಶಿವಮ್ಮ (37) ಹಾಗೂ ಮಕ್ಕಳಾದ ಸಿಂಚು (7), ಪವನ್ (10) ಮೃತರು. ನಿನ್ನೆ ಶಿವಮ್ಮ ಪತಿ ತೀರ್ಥ ಎಷ್ಟೇ ಫೋನ್ ಮಾಡಿದರೂ ಶಿವಮ್ಮ ಫೋನ್ ಸ್ವೀಕರಿಸಿರಲಿಲ್ಲ. ಗಾಬರಿಯಾದ ಪತಿ ಇಂದು ಬೆಳಿಗ್ಗೆ ದಾಸರಕೊಪ್ಪಲಿನ ಮನೆಗೆ ಬಂದು ನೀಡಿದ್ದಾರೆ. ಈ ವೇಳೆ ಮನೆ ಬಾಗಿಲು ಹಾಕಿಯೇ ಇತ್ತು. ಎಷ್ಟು ಹೊತ್ತಾದರೂ ಬಾಗಿಲು ತೆರೆದಿರಲಿಲ್ಲ.
ಬಾಗಿಲು ಒಡೆದು ಒಳ ನೋಡಿದಾಗ ಪತ್ನಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಗ್ಯಾಸ್ ಆನ್ ಮಾಡಿಟ್ಟು ತಾಯಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪೆನ್ಶನ್ ಮೊಹಲ್ಲಾ ಥಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.




