ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿ ಇವರಲ್ಲಿನ ಪರಶುರಾಮ ಅಲಿಯಸ ಪರಸಪ್ಪ. ಬಸಲಿಂಗಪ್ಪ ಜಂಗಳಿ ಸಾ:ಮಾಸ್ತಮರ್ಡಿ ಇವರಿಂದ ೧೯,೧೮,೫೯೨ ರೂ. ಗಳ ಮೊತ್ತವು ಬಾಕಿ ಇರುವುದರಿಂದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ, ವಸೂಲಿ ಮಾಡಲು ನ್ಯಾಯಾಲಯವು ಆದೇಶ ನೀಡಿದೆ.
ಸದರಿ ಮೊತ್ತದ ವಸೂಲಾತಿಗಾಗಿ ಮಾಸ್ತಮರಡಿ ಗ್ರಾಮದ ಬಾಕೀದಾರರ ಮಾಕ್ಕಿಯ ಆಸ್ತಿಯನ್ನು ಜ.೧೯ ೨೦೨೪ ರಂದು ಬೆಳಿಗ್ಗೆ ೧೧ ಘಂಟೆಗೆ ಬೆಳಗಾವಿ ತಹಸೀಲ್ದಾರ ಅಧಿಕಾರ ಪಡೆದ ಅಧಿಕಾರಿಯ ಸಮ್ಮುಖದಲ್ಲಿ ಬಹಿರಂಗ ಹರಾಜು ಮಾಡುವುದರ ಮೂಲಕ ವಸೂಲಾತಿ ಕೈಕೊಳ್ಳಲಾಗುವುದು ಆಸಕ್ತಿಯುಳ್ಳ ವ್ಯಕ್ತಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ತಹಸೀಲ್ದಾರ ಕಾರ್ಯಾಲಯವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಬೆಳಗಾವಿ ತಹಸೀಲ್ದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ