ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ (ಸಿವ್ಹಿಲ್) ಹುದ್ದೆಗಳಿಗೆ ಅರ್ಜಿಗಳನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೂಲ ದಾಖಲಾತಿ ಪರಿಶೀಲನೆಗೆ ಫೆ. ೧೯ ರಂದು ಬೆಳಗ್ಗೆ ೧೧.೦೦ ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಾಜರಾಗುವಂತೆ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅದಿsಕಾರಿಗಳು ತಿಳಿಸಿದ್ದಾರೆ.
೨೦೨೩ರ ಸಾಲಿನ ಆ.೮ ರಿಂದ ೨೧ರ ವರೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ (ಸಿವ್ಹಿಲ್) ಹುದ್ದೆಗಳಿಗೆ ಅರ್ಜಿಗಳನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೂಲ ದಾಖಲಾತಿ ಪರಿಶೀಲನೆಗೆ ಕಾಲಾವಕಾಶ ನೀಡಿತು. ಅದರಂತೆ ಅವಧಿಯಲ್ಲಿ ೬೨೪ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆಕ್ಷೇಪಣೆಯಲ್ಲ್ಲಿ ಬಹಳಷ್ಟು ಜನ ಮೂಲ ದಾಖಲಾತಿ ಪರಿಶೀಲನೆ ಮಾಹಿತಿಯ ಕೊರತೆಯಿಂದಾಗಿ ಹಾಜರಾಗಲು ಸಾದ್ಯವಾಗಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳೆಗೆ ಮತ್ತೊಮ್ಮೆ ದಾಖಲಾತಿ ಪರಿಶೀಲನೆಗೆ ಅಂತಿಮ ಅವಕಾಶ ನೀಡಲಾಗಿದೆ.
ಔಟಿಟiಟಿeದಲ್ಲಿ ನಮೂದಿಸಿದ ಅಂಕಗಳ ಆಧಾರದ ಮೇಲೆ ೫೦ ಜನ ಅಭ್ಯರ್ಥಿಗಳನ್ನು ದಿ: ೨೯-೧೧-೨೩ ರಂದು ಮೂಲ ದಾಖಲಾತಿ ಪರಿಶೀಲನೆಗೆ ಆಹ್ವಾನಿಸಲಾಗಿತ್ತು. ೨೭ ಜನ ಅಭ್ಯರ್ಥಿಗಳು ಹಾಜರಾಗಿದ್ದರು. ಅದರಂತೆ ಜೇಷ್ಠತಾ ಪಟ್ಟಿ ತಯಾರಿಸಿ, ಜ.೧೭-೨೦೨೪ ರಿಂದ ಜ.೨೪-೨೦೨೪ ರ ವರೆಗೆ ಸದರಿ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆ ಕರೆಯಲಾಗಿತ್ತು. ಅಂಕಗಳು ವ್ಯತ್ಯಾಸವಾಗಿರುವ ಬಗ್ಗೆ ಆಕ್ಷೇಪಣೆ ಸ್ವೀಕೃತವಾಗಿದ್ದವು.
ಮಹಾತ್ಮಾ ನರೇಗಾ ಯೋಜನೆಯಡಿ ತಾಂತ್ರಿಕ ಸಹಾಯಕರು” (ಸಿವ್ಹಿಲ್) ಹುದ್ದೆಗಳಿಗೆ ಜಿಲ್ಲಾ ಪಂಚಾಯತ ವೆಬ್‌ಸೈಟ್ ಮೂಲಕ ಔಟಿಟiಟಿe ನಲ್ಲಿ ಅರ್ಜಿ ಸಲ್ಲಿಸಲಾದ ೬೨೪ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಫೆ. ೧೯ ರಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಿಗದಿಪಡಿಸಲಾಗಿದೆ.
ಸದರಿ ದಿನದಂದು ಹಾಜರಾಗದೇ ಇದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಜೇಷ್ಠತಾ ಪಟ್ಟಿಯಲ್ಲಿ ಪರಿಗಣಿಸಲಾಗುವುದಿಲ್ಲ, ಹಾಗೂ ಯಾವುದೇ ಆಕ್ಷೇಪಣೆಗಳಿಗೆ ಅವಕಾಶ ಇರುವುದಿಲ್ಲವೆಂದು ಅಂತಿಮ ಸೂಚನೆ ನೀಡಲಾಗಿದೆ. ದಾಖಲಾತಿ ಪರಿಶೀಲನೆಗೆ ತಪ್ಪು ಮಾಹಿತಿ ಒದಗಿಸಿದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ