ಕಾಂಗ್ರೆಸ್ ಪಾರ್ಟಿಯನ್ನ ನಾವಲ್ಲ ಜನರೇ ವೀಕ್ ಮಾಡಿದ್ದಾರೆ: ಪ್ರಹ್ಲಾದ ಜೋಶಿ
– ಬಿಜೆಪಿ ಈ ಬಾರಿ ಐತಿಹಾಸಿಕ ಗೆಲುವು ದಾಖಲಿಸಲಿದೆ
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್ ಪಾರ್ಟಿಯನ್ನು ನಾವಲ್ಲ, ಜನರೇ ವೀಕ್ ಮಾಡಿದ್ದಾರೆ! ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶಿಗ್ಗಾವಿಯಲ್ಲಿ ಇಂದು ಚುನಾವಣ ಪ್ರಚಾರ ಸಭೆಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿಗರ ಅಕೌಂಟ್ ಸೀಜ್ ನಾವೇಕೆ ಮಾಡಿಸೋಣ. ತೆರಿಗೆ ಕಟ್ಟದಿದ್ದಕ್ಕೆ ಸಹಜವಾಗಿಯೇ ಕ್ರಮವಾಗಿರುತ್ತದೆ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ವೀಕ್ ಮಾಡಲು ಬಿಜೆಪಿ ಇಡಿಯನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿ, ಕಾಂಗ್ರೆಸ್ ವೀಕ್ ಮಾಡಲು ನಾವೇಕೆ ಬೇಕು. ಜನರೇ ವೀಕ್ ಮಾಡ್ಯಾರ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಹೀಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಜನ ಬಿಜೆಪಿ ಪರ ಇದ್ದಾರೆ ಎಂದು ಹೇಳಿದರು.
ಧಾರವಾಡ ಲೋಕಸಭೆ ಕ್ಷೇತ್ರ ಮಾತ್ರವಲ್ಲ, ರಾಜ್ಯ ಮತ್ತು ಇಡೀ ದೇಶದಲ್ಲೇ ಬಿಜೆಪಿ ಐತಿಹಾಸಿಕ ಗೆಲುವನ್ನ ದಾಖಲಿಸಲಿದೆ. ಕಳೆದ ಬಾರಿ 2 ಲಕ್ಷ ಮತ ಅಂತರದಿಂದ ಗೆದ್ದಿದ್ದೆ. ಈ ಬಾರಿ 4 ಲಕ್ಷ ಅಂತರದಲ್ಲಿ ಗೆಲ್ಲುವೆ ಎಂದು ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ