Kannada NewsKarnataka NewsLatest

*ಏರ್‌ಪ್ರೆಷ‌ರ್ ಪೈಪ್‌ನಿಂದ ಗುದನಾಳಕ್ಕೆ ಗಾಳಿ ಬಿಟ್ಟ ಭೂಪ: ಯುವಕ ಬಲಿ*

ಪ್ರಗತಿವಾಹಿನಿ ಸುದ್ದಿ: ಊರು ಬಿಟ್ಟು ಬೇರೆ ಊರಗೆ ಹೊಟ್ಟೆಪಾಡಿಗೆ ಹೊಗಿದ್ದ ಯುವಕನು ಈಗ ಮಸಣ ಸೇರಿರುವ ಘಟನೆ ಬೆಳಕಿಗೆ ಬಂದಿದೆ. ವಿಜಯಪುರ ಮೂಲದ ಯೋಗೀಶ್ (24) ಮೃತ ಯುವಕನಾಗಿದ್ದು, ಇತನ ಸ್ನೇಹಿತನ ಹುಚ್ಚಾಟದಿಂದ ಯೋಗಶ್ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಏರ್‌ಪ್ರೆಷ‌ರ್ ಪೈಪ್‌ನಿಂದ ಗುದನಾಳಕ್ಕೆ ಗಾಳಿ ಬಿಟ್ಟ ಪರಿಣಾಮ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್ ಆಗಿ ಯೋಗೇಶ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Home add -Advt

ಈ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ನಡೆದಿದ್ದು, ಘಟನೆ ಸಂಬಂಧಿಸಿದಂತೆ ಪೊಲೀಸರು ಯೋಗೀಶ್ ಸ್ನೇಹಿತ ಆರೋಪಿ ಮುರಳಿ (25) ಯನ್ನು ವಶಕ್ಕೆ ಪಡೆದಿದ್ದಾರೆ.

ಮಾರ್ಚ್ 25ರಂದು ಬೈಕ್‌ ರಿಪೇರಿ ಮಾಡಿಸಲೆಂದು ಯೋಗೀಶ್ ಸಂಪಿಗೆಹಳ್ಳಿಯಲ್ಲಿರುವ ಸಿಎನ್‌ಸಿ ಸರ್ವೀಸ್‌ ಸೆಂಟರ್‌ಗೆ ಆಗಮಿಸಿದ್ದಾನೆ. ಈ ಸಿಎನ್ಎಸ್ ಸರ್ವೀಸ್ ಸೆಂಟರ್‌ನಲ್ಲಿ ಯೋಗೀಶ್ ಸ್ನೇಹಿತ ಮುರಳಿ ಕೆಲಸ ಮಾಡುತ್ತಿದ್ದ.
ಈ ಸರ್ವೀಸ್ ಸೆಂಟರ್‌ನಲ್ಲಿದ್ದ ಏರ್‌ಪ್ರೆಷರ್ ಪೈಪ್‌ನಿಂದ ಇಬ್ಬರು ಆಟ ಆಡಲು ಮುಂದಾಗಿದ್ದರು. ಮುರುಳಿ ಮೊದಲಿಗೆ ಯೋಗೀಶ್‌ನ ಮುಖ ಹಾಗೂ ಹೊಟ್ಟೆಗೆ ಗಾಳಿ ಬಿಟ್ಟಿದ್ದಾನೆ. ಬಳಿಕ ಆತ ಗುದನಾಳಕ್ಕೆ ಏರ್‌ಪ್ರೆಷರ್‌ನಿಂದ ಗಾಳಿ ಬಿಟ್ಟಿದ್ದಾನೆ. ಪರಿಣಾಮ ಯೋಗೀಶ್ ಹೊಟ್ಟೆ ಊದಿಕೊಂಡು ಕರುಳು ಬ್ಲಾಸ್ಟ್ ಆಗಿದೆ. ಕರಳು ಬ್ಲಾಸ್ಟ್ ಆದ ತಕ್ಷಣ ಮುರಳಿ ಸ್ಥಳೀಯ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗೀಶ್ ಮೃತಪಟ್ಟಿದ್ದಾನೆ. ಮೃತ ಯೋಗೇಶ್ ಪೋಷಕರು ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಖಲಿಸಿರುವ ಪೊಲೀಸರು ಮುರಳಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.‌

Related Articles

Back to top button