Kannada NewsKarnataka NewsLatestPolitics

*RSS ಗಣವೇಷದಲ್ಲೇ ಬಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಕಾರ್ಯಕರ್ತ, ರಾಜಕೀಯ ನಾಯಕರ ಪಕ್ಷಾಂತರ ಪರ್ವ ಕೂಡ ಜೋರಾಗಿದೆ. ಈ ನಡುವೆ ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಆರ್.ಎಸ್.ಎಸ್ ಗಣವೇಷದಲ್ಲಿಯೇ ಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ.

Home add -Advt

ನರಗುಂದದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ್ ಎನ್ನುವವರು ಆರ್.ಎಸ್.ಎಸ್ ಸ್ವಯಂ ಸೇವಕರಾಗಿದ್ದರು. ಕಳೆದ 30 ವರ್ಷಗಳಿಂದ ಆರ್.ಎಸ್.ಎಸ್ ಅಲ್ಲಿ ಸಕ್ರಿಯರಾಗಿದ್ದ ಅವರು ಇಂದು ಏಕಾಏಕಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಅಚ್ಚರಿ ಎಂದರೇ ಆರ್.ಎಸ್.ಎಸ್ ಗಣವೆಷದಲ್ಲಿ, ಕೈಯಲ್ಲಿ ದಂಡ ಹಿಡಿದು ವೇದಿಕೆಗೆ ಬಂದ ನಿಂಗಬಸಪ್ಪ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಿಂಗಪ್ಪ ಅವರ ತಲೆ ಮೇಲೆ ಇದ್ದ ಆರ್.ಎಸ್.ಎಸ್ ಟೋಪಿ ತೆಗೆದು ಖಾದಿ ಗಾಂಧಿ ಟೋಪಿ ಹಾಕಿ, ಕಾಂಗ್ರೆಸ್ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಸೇರೊಸಿಕೊಳ್ಳಲಾಯಿತು.

ಈ ವೇಳೆ ಮಾತನಾಡಿದ ನಿಂಗಬಸಪ್ಪ, ಭ್ರಷ್ಟಾಚಾರ ವಿರೋಧಿಯಾಗಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂದು ತಿಳಿಸಿದ್ದಾರೆ.


Related Articles

Back to top button