ಪ್ರಗತಿವಾಹಿನಿ ಸುದ್ದಿ: ದೂದಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೊಗಿದ್ದ ನಾಲ್ವರು ನೀರುಪಾಲಾಗಿರುವ ಘಟನೆ ಕೊಲ್ಲಾಪುರ ಜಿಲ್ಲೆಯ ಕಾಗಲ ತಾಲೂಕಿನ ಬಸ್ತವಾಡೆ ಸೇತುವೆ ಬಳಿ ನಡೆದಿದೆ.
ಮೃತರಲ್ಲಿ ಇಬ್ಬರು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿಗಳು. ರೇಷ್ಮಾ ದಿಲೀಪ ಯಳಮಲೆ (34) ಹಾಗೂ ಯಶ್ ದಿಲೀಪ್ ಯಳಮಲೆ (17) ಇವರಿಬ್ಬರೂ ಕಾಗಲ ತಾಲೂಕಿನ ಅನ್ನುರ ಗ್ರಾಮದ ಜಾತ್ರೆಗೆ ಸಂಬಂಧಿಕರ ಮನೆಗೆ ಬಂದಿದ್ದರು. ಇನ್ನಿಬ್ಬರು ಕೊಲ್ಲಾಪುರ ಜಿಲ್ಲೆಯವರು. ಕೊಲ್ಲಾಪುರ ಜಿಲ್ಲೆಯ ಮುರಗುಡ ನಿವಾಸಿ ಜಿತೇಂದ್ರ ಲೋಕರೆ (36) ಹಾಗೂ ಕೊಲ್ಲಾಪುರ ಜಿಲ್ಲೆಯ ರೂಕಡಿ ಗ್ರಾಮದ ನಿವಾಸಿ ಸವಿತಾ ಅಮರ ಕಾಂಬಳೆ (27) ಮೃತರಾಗಿದ್ದಾರೆ.
ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ದೂಧಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಬಿದ್ದು ಮುಳುಗಿ ನಾಲ್ವರು ಮೃತಪಟ್ಟರು. ಗ್ರಾಮಸ್ಥರು ಇಬ್ಬರು ಮಹಿಳೆಯರು ಸೇರಿ 3 ಮಂದಿಯ ಶವಗಳನ್ನು ನದಿಯಿಂದ ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಒಬ್ಬನ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆದಿದೆ. ಕಾಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ