ಪ್ರಗತಿವಾಹಿನಿ ಸುದ್ದಿ: ವಿ.ಸೋಮಣ್ಣ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಇತ್ತ ಪುತ್ರನ ವಿರುದ್ಧ ವಂಚನೆ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿದೆ.
ತೃಪ್ತಿ ಹೆಗಡೆ ಎಂಬುವವರು ಸಲ್ಲಿಸಿರುವ ದೂರುನ ಹಿನ್ನೆಲೆಯಲ್ಲಿ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ, ಜೀವನ್ ಕುಮಾರ್ ಹಾಗೂ ಪ್ರಮೋದ್ ರಾವ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಅರುಣ್ ಸೋಮಣ್ಣ, ಮಧ್ವರಾಜ್ ಎಂಬುವವರು ನೈಬರ್ ಹುಡ್ ಎಂಬ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಆರಂಭಿಸಿದ್ದರು. ಕಂಪನಿಯ ಹೂಡಿಕೆ, ಪಾವತಿ ಹಾಗೂ ಸಂಗ್ರಹಣೆ ಜವಾಬ್ದಾರಿ ಅರುಣ್ ಸೋಮಣ್ಣ ವಹಿಸಿಕೊಂಡಿದ್ದರು. ಕಂಪನಿ ನಷ್ಟವಾದಾಗ ಮಧ್ವರಾಜ್ ಅರುಣ್ ಬಳಿ ವಿಚಾರಿಸಿದ್ದಾರೆ ಆದರೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕಂಪನಿಗೆ ರಾಜೀನಾಮೆ ನೀಡುವಂತೆ ಅರುಣ್, ಮಧ್ವರಾಜ್ ಗೆ ಒತ್ತಾಯಿಸುತ್ತಿದ್ದರಂತೆ. ಅಲ್ಲದೇ ನಷ್ಟವಾಗಿರುವ ಹಣವನ್ನು ಮಧ್ವರಾಜ್ ದಂಪತಿಯಿಂದ ಬಲವಂತವಾಗಿ ಬೆದರಿಸಿ ವಸೂಲಿ ಮಾಡಿದ್ದರಂತೆ. ಈ ಹಿನ್ನೆಲೆಯಲ್ಲಿ ಅರುಣ್ ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಸಂಜಯ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ