Kannada NewsKarnataka News

ಬೆಳಗಾವಿ ಜಿಲ್ಲೆಯ ಪ್ರಮುಖ ಸುದ್ದಿಗಳು

ಯುವತಿ ಕಾಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-

ಪ್ರೇಮಾ ವಿಜಯ ನಿಂಬಾಳಕರ ಎಂಬ ಯುವತಿ ವಡಗಾವಿಯ ಮಂಗಾಯಿನಗರ ೧ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಯಿಂದ ಸೆಪ್ಟೆಂಬರ ೩ ರಂದು ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಇದುವರೆಗೂ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಎಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರೇಮಾ ವಿಜಯ ನಿಂಬಾಳಕರ ವಯಸ್ಸು ೨೧ ವರ್ಷ, ಗೋದಿ ಕೆಂಪು ಮೈಬಣ್ಣ, ೫ ಇಂಚು ಎತ್ತರ ಹಾಗೂ ಕನ್ನಡ ಭಾಷೆ ಮಾತನಾಡುತ್ತಾಳೆ.
ಈ ಪ್ರಕಾರ ಚಹರೆಯುಳ್ಳ ಯುವತಿ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಶಹಾಪೂರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧-೨೪೦೫೨೪೪, ಪೊಲೀಸ್ ಇನ್ಸಪೆಕ್ಟರ್ ದೂರವಾಣಿ ಸಂಖ್ಯೆ ೯೪೮೦೮೦೪೦೪೬, ಪೊಲೀಸ್ ಕಂಟ್ರೋಲ್ ರೂಮ್ ೧೦೦ ನ್ನು ಸಂಪರ್ಕಿಸಬೇಕೆಂದು ಶಹಾಪೂರ ಪೊಲೀಸ್ ಠಾಣೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಸರಾ ಉತ್ಸವ: ಪುಸ್ತಕ ಮಾರಾಟ ಮೇಳಕ್ಕೆ ಅರ್ಜಿ ಆಹ್ವಾನ

ಜಗತ್ತಿನ ಪ್ರಸಿದ್ದ ಮೈಸೂರು ದಸರಾ ಉತ್ಸವ-೨೦೧೯ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಸೆಪ್ಟಂಬರ್ ೨೯ ರಿಂದ ಅಕ್ಟೊಂಬರ್ ೭ ರವರಿಗೆ ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-೨೦೧೯ನ್ನು ಮೈಸೂರಿನ ಕಾಡಾ ಮೈದಾನದದಲ್ಲಿ ಏರ್ಪಡಿಸಲಾಗುವುದು. ಪುಸ್ತಕ ಮಾರಾಟ ಮೇಳದಲ್ಲಿ ಪಾಲ್ಗೋಳಲು ಬಯಸುವ ಪುಸ್ತಕ ಮಾರಾಟಗಾರರು ಭರ್ತಿಮಾಡಿದ ಅರ್ಜಿಯನ್ನು ರೂ.೨೦೦೦ ಡಿ.ಡಿ ಯೊಂದಿಗೆ ಸೆಪ್ಟಂಬರ್ ೨೧ ರಂದು ಸಂಜೆ ೫ ಗಂಟೆಯೊಳಗೆ ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಜೆ.ಸಿ ರಸ್ತೆ ಬೆಂಗಳೂರುರವರ ಹೆಸರಿಗೆ ಸಲ್ಲಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಜೆ.ಸಿ ರಸ್ತೆ ಬೆಂಗಳೂರು-೫೬೦೦೦೨ ದೂರವಾಣಿ ಸಂಖ್ಯೆ:೦೮೦-೨೨೪೮೪೫೧೬, ೨೨೧೦೭೭೦೪ ನ್ನು ಸಂಪರ್ಕಿಸಲು ತಿಳಿಸಿದ್ದಾರೆ.

ಪ್ರವಾಹ ನಂತರದ ಕೃಷಿ ಚಟುವಟಿಕೆ ಕ್ರಮ

ಜಿಲ್ಲೆಯಾದ್ಯಂತ ವ್ಯಾಪಕವಾಗಿ ಆಗಸ್ಟ್ ತಿಂಗಳಲ್ಲಿ ಮಳೆಯಾಗಿದ್ದು, ನೆರೆ ಹಾವಳಿ ನಂತರದ ಕೃಷಿ ಚಟುವಟಿಕೆ ಕೈಗೊಳ್ಳಲು ಬೆಳಗಾವಿ ಜಂಟಿ ಕೃಷಿ ನಿರ್ದೇಶಕರು ಜಿಲಾನಿ ಮೊಕಾಶಿ ಅವರು ತಿಳಿಸಿದ್ದಾರೆ.
ಸಸಿ ಮಡಿಗಳಲ್ಲಿ ಹೆಚ್ಚಿನ ನೀರು ಬಸಿಯುವುದು, ಶಿಲೀಂದ್ರನಾಶಕ ಸಿಂಪಡಿಸಿ ಮರು ಸಸಿ ಮಡಿ ತಯಾರಿಸಬೇಕು. ಹೂವಾಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿ ಇರುವ ಬೆಳೆ ಪ್ರದೇಶದಲ್ಲಿ ಹೆಚ್ಚಿನ ನೀರು ಬಸಿಯುವುದು ಹಾಗೂ ಕಳೆ ತೆಗೆದು ಮಣ್ಣು ಎರಿಸುವುದು.
ಬೆಳವಣಿಗೆ ಪ್ರಚೋದಕಗಳಾದ ಎನ್.ಎ.ಎ (ಪ್ಲಾನೊಪಿಕ್ಸ್) ವನ್ನು ನಾಲ್ಕು ಲೀಟರ್ ನೀರಿಗೆ ಒಂದು ಮೀ.ಲಿ. ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸುವುದು. ಇದರೊಂದಿಗೆ ಬೊರಾಕ್ಸ್ ೧೦ ಗ್ರಾಂ, ಲೀಟರ್ ನೀರಿಗೆ ಬೆರೆಸಿ ಲಘು ಪೋಷಕಾಶವನ್ನು ಸಿಂಪಡಿಸುವುದರೊಂದಿಗೆ ಹೆಚ್ಚಿನ ನೀರು ಹರಿದು ಹೋಗಲು ಸಾಲುಗಳನ್ನು ನಿರ್ಮಿಸಲು ಸಲಹೆ ನೀಡಿದ್ದಾರೆ.
ಕಟಾವು ಹಂತದ ಬೆಳೆಗಳಲ್ಲಿ ಹೆಚ್ಚಿನ ನೀರನ್ನು ಬಸಿಯುವುದು ಮತ್ತು ಕಾಳುಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಬೇಕು. ಒಂದು ವೇಳೆ ಯಾವುದೇ ಹಂತದಲ್ಲಿ ಬೆಳವಣಿಗೆ ಕಾಣದಿದ್ದಲ್ಲಿ ಬೆಳೆಯನ್ನು ಮೇವಿಗಾಗಿ ಕತ್ತರಿಸಿ ಮರು ಬಿತ್ತನೆ ಮಾಡಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ: ಬೀದಿ-ಬದಿ ವ್ಯಾಪಾರಸ್ಥರ ಪಟ್ಟಿ ಪ್ರಕಟ- ಆಕ್ಷೇಪಣೆ ಆಹ್ವಾನ

ಕರ್ನಾಟಕ ಬೀದಿ-ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮಗಳು-೨೦೧೯ನ್ನು ಅನುಷ್ಟಾನಗೊಳಿಸುವ ಸಂಬಂಧ ಪಟ್ಟಣ ಮಾರಾಟ ಸಮಿತಿಗೆ ಬೀದಿ-ಬದಿ ವ್ಯಾಪಾರಸ್ಥರಿಂದ ಆಯ್ಕೆ ಮಾಡಬೇಕಾಗಿರುತ್ತದೆ.
ಬೆಳಗಾವಿ ಮಹಾನಗರ ಪಾಲಿಕೆಯಿಂದ ಸಮೀಕ್ಷೆಯ ಮೂಲಕ ಗುರುತಿಸಲಾಗಿರುವ ಒಟ್ಟು ೨೬೫೩ ಬೀದಿ-ಬದಿ ವ್ಯಾಪಾರಸ್ಥರ ತಾತ್ಕಾಲಿಕ ಕರಡು ಪ್ರತಿಯನ್ನು ಸಿದ್ಧಪಡಿಸಿ, ಬೆಳಗಾವಿ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯ ಸೂಚನಾ ಫಲಕದಲ್ಲಿ ಸೆಪ್ಟೆಂಬರ ೫ ರಂದು ಪ್ರಕಟಿಸಲಾಗಿದೆ.
ಈ ಕರಡು ಪಟ್ಟಿಗೆ ಬೀದಿ-ಬದಿ ವ್ಯಾಪಾರಸ್ಥರಿಂದ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ ೨೦ರ ಒಳಗಾಗಿ ಬೆಳಗಾವಿ ಮಹಾನಗರ ಪಾಲಿಕೆ ಅಯುಕ್ತರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಕೇಶ್ವರ: ಬೀದಿ-ಬದಿ ವ್ಯಾಪಾರಸ್ಥರ ಪಟ್ಟಿ ಪ್ರಕಟ- ಆಕ್ಷೇಪಣೆ ಆಹ್ವಾನ

ಕರ್ನಾಟಕ ಬೀದಿ-ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮಗಳು-೨೦೧೯ನ್ನು ಅನುಷ್ಟಾನಗೊಳಿಸುವ ಸಂಬಂಧ ಪಟ್ಟಣ ಮಾರಾಟ ಸಮಿತಿಗೆ ಬೀದಿ-ಬದಿ ವ್ಯಾಪಾರಸ್ಥರಿಂದ ಆಯ್ಕೆ ಮಾಡಬೇಕಾಗಿರುತ್ತದೆ.
ಸಂಕೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಸಮೀಕ್ಷೆ ಮೂಲಕ ಗುರುತಿಸಲಾಗಿರುವ ಒಟ್ಟು ೨೧೫ ಬೀದಿ-ಬದಿ ವ್ಯಾಪಾರಸ್ಥರ ತಾತ್ಕಾಲಿಕ ಕರಡು ಪ್ರತಿಯನ್ನು ಸಿದ್ಧಪಡಿಸಿ, ಬೆಳಗಾವಿ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯ ಸೂಚನಾ ಫಲಕದಲ್ಲಿ ಸೆಪ್ಟೆಂಬರ ೫ ರಂದು ಪ್ರಕಟಿಸಲಾಗಿದೆ.
ಈ ಕರಡು ಪಟ್ಟಿಗೆ ಬೀದಿ-ಬದಿ ವ್ಯಾಪಾರಸ್ಥರಿಂದ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ ೨೦ರ ಸಂಜೆ ೫ ಗಂಟೆಯೊಳಗಾಗಿ ಲಿಖಿತ ರೂಪದಲ್ಲಿ ಸಂಕೇಶ್ವರ ಪುರಸಭೆ ಕಾರ್ಯಾಲಯಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೋದಯ ವಿದ್ಯಾಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಚಿಕ್ಕೋಡಿ ತಾಲೂಕಿನ ಕೋಥಳಿ ಕುಪ್ಪಾನವಾಡಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದ ೨೦೧೯-೨೦ನೇ ಸಾಲಿಗೆ ೬ನೇ ವರ್ಗಕ್ಕೆ ಪ್ರವೇಶಕ್ಕಾಗಿ ೧೧ ಜನೇವರಿ ೨೦೨೦ ರಂದು ನಡೆಯುವ ಪ್ರವೇಶ ಪರಿಕ್ಷೆಯ ಅರ್ಜಿಗಳನ್ನು ಆನ್‌ಲೈನ ಮುಖಾಂತರ ಆಹ್ವಾನಿಸಲಾಗಿದೆ.
ಪ್ರವೇಶ ಪರೀಕ್ಷೆಯ ಅರ್ಜಿಗಳನ್ನು ಸಲ್ಲಿಸಲು ಸೆಪ್ಟಂಬರ್ ೧೫ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ನವೊದಯ ವಿದ್ಯಾಲಯ ಸಮಿತಿಯ ಜಾಲತಾಣ ನೋಡಬಹುದು. ಜವಾಹರ ನವೋದಯ ವಿದ್ಯಾಲಯದಲ್ಲಿ ಸಹಾಯಕ ಕೇಂದ್ರವನ್ನು ಜಾರಿಗೆಗೊಳಿಸಲಾಗುವವರಿಂದ ಆಸಕ್ತರು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರನ್ನು ಸಂಪರ್ಕಿಸಬಹುದು ಎಂದು ಉಸ್ತುವಾರಿ ಪ್ರಾಚಾರ್ಯರಾದ ಅನುರಾಧಾ ಕೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.೧೨ ರಂದು ಗ್ರಾಹಕ ಸೇವಾ ಕೇಂದ್ರ ಉದ್ಘಾಟನಾ ಸಮಾರಂಭ

ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕ ಸೇವಾ ಕೇಂದ್ರವನ್ನು ನಗರದ ಪುಲ್‌ಬಾಗ ಗಲ್ಲಿಯಲ್ಲ್ಲಿ ಸೆ.೧೨ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಬೆಳಗಾವಿ ಉತ್ತರ ವಲಯದ ಶಾಸಕ ಅನೀಲ ಬೆನಕೆ ಅವರು ಉದ್ಘಾಟಿಸಲಿದ್ದಾರೆ.

ಗ್ರಾಹಕರಿಗೆ ದೊರೆಯುವ ಸೇವೆಗಳು:
ಗ್ರಾಹಕರಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಹಣ ವರ್ಗಾವಣೆ, ಆಸ್ತಿ ತೆರಿಗೆ ಪಾವತಿಗಳು, ಪಡಿತರ ಚೀಟಿಗಾಗಿ ಅರ್ಜಿ, ಜನನ ಪ್ರಮಾಣ ಪತ್ರ ಅರ್ಜಿ, ಎಸ್.ಬಿ.ಐ ಮತ್ತು ಸಿ.ಎಸ್.ಪಿ ಬ್ಯಾಂಕಿಂಗ್ ಸೇವೆಗಳು, ನಗದು ಠೇವಣಿ, ನಗದು ಹಿಂಪಡಿಯುವಿಕೆ, ನಿಧಿ ವರ್ಗಾವಣೆ, ಖಾತೆ ತೆರಿಯುವಿಕೆ, ಮುದ್ರಾ ಸಾಲಗಳ ಅರ್ಜಿಯನ್ನು ಸ್ವಿಕರಿಸುವುದು ಮುಂತಾದ ಸೇವೆಗಳು ದೊರೆಯುತ್ತವೆ ಎಂದು ಶಶಿಕಾಂತ ಮೊಕಾಶಿ ಮತ್ತು ಮಿಲಿಂದಾ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button