Belagavi NewsBelgaum NewsKannada NewsKarnataka NewsNational

*ಜುಲೈ 8ರ ವರೆಗೆ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ಜುಲೈ 8ರ ವರೆಗೆ ಕರಾವಳಿ ಭಾಗ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.‌

ಯೆಲ್ಲೋ ಅಲರ್ಟ್​ ಘೋಷಣೆ

ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಯೆಲ್ಲೋ ಅಲರ್ಟ್​ ಘೋಷಿಸಿದೆ.

ಸಾರ್ವಜನಿಕರು ಹಾಗೂ ಮೀನುಗಾರರು ನದಿ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರವಹಿಸಬೇಕು. ಮಕ್ಕಳು ಸಾರ್ವಜನಿಕರು ವಿದ್ಯುತ್ ಕಂಬದ ಹತ್ತಿರವಿರಬಾರದು, ತುಂಡಾದ ವಿದ್ಯುತ್ ತಂತಿಗಳಿಂದ ದೂರ ಇರಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಈಗಾಗಲೇ ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲೂ ಮಳೆಯಾಗಲಿದೆ. ಕೊಲ್ಲೂರು, ಸಿದ್ದಾಪುರ, ಕೊಟ್ಟಿಗೆಹಾರ, ಕೋಟ, ಆಗುಂಬೆ, ಧರ್ಮಸ್ಥಳ, ಉಡುಪಿ, ಲಿಂಗನಮಕ್ಕಿಯಲ್ಲಿ ಹೆಚ್ಚು ಮಳೆಯಾಗಿದೆ.

ಭಾಗಮಂಡಲ, ಉಪ್ಪಿನಂಗಡಿ, ಕದ್ರಾ, ಸಿದ್ದಾಪುರ, ಮಂಗಳೂರು, ಶಿರಾಲಿ, ಕುಂದಾಪುರ, ಮಾಣಿ, ಕಾರ್ಕಳ, ನಾಪೊಕ್ಲು, ಪೊನ್ನಂಪೇಟೆ, ಗೇರುಸೊಪ್ಪ, ಬೆಳ್ತಂಗಡಿ, ಮಂಕಿ, ಪುತ್ತೂರು, ಕಿರವತ್ತಿ, ಯಲ್ಲಾಪುರ, ಕಮ್ಮರಡಿ, ಕಳಸ, ಹುಂಚದಕಟ್ಟೆ, ಕೊಪ್ಪ, ಶೃಂಗೇರಿ, ತಾಳಗುಪ್ಪ, ಮೂರ್ನಾಡು, ಗೋಕರ್ಣ, ಬನವಾಸಿ, ಅಂಕೋಲಾ, ಹೊನ್ನಾವರ, ಶಿಗ್ಗಾಂವ್, ಸವಣೂರು, ಜಯಪುರ, ಸೋಮವಾರಪೇಟೆ, ಗೌರಿಬಿದನೂರು, ಬಂಡೀಪುರ, ಅರಕಲಗೂಡು, ಕುಶಾಲನಗರ, ಕುಮಟಾ, ಮುಲ್ಕಿ, ಹಳಿಯಾಳ, ಹಿರೇಕೆರೂರು, ಸುಳ್ಯ, ಹಗರಿಬೊಮ್ಮನಹಳ್ಳಿ, ಹಾರಂಗಿ, ಕೊಟ್ಟೂರು, ಎನ್​ಆರ್​ಪುರ, ಚಿತ್ರದುರ್ಗ, ಮಾಗಡಿಯಲ್ಲಿ ಮಳೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button