Kannada NewsKarnataka NewsNationalSports

*ಕಾಪುವಿ‌ನ ಮಾರುಗುಡಿ ದೇಗುಲಕ್ಕೆ ಭೇಟಿ ನೀಡಿದ ಸೂರ್ಯಕುಮಾರ್ ಯಾದವ್ ದಂಪತಿ*

ಪ್ರಗತಿವಾಹಿನಿ ಸುದ್ದಿ: ಮಿಸ್ಟರ್‌ 360 ಖ್ಯಾತಿಯ ಭಾರತೀಯ ಬ್ಯಾಟರ್ ಹಾಗೂ ವಿಶ್ವಕಪ್ ವಿಜೇತ ತಂಡದ ಸ್ಟಾರ್ ಆಟಗಾರ (ಸ್ಕ್ಯಾಯ್) ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ಉಡುಪಿಯ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು.

20-20 ವಿಶ್ವಕಪ್ ಗೆದ್ದ ಬಳಿಕ ಸುರ್ಯಕುಮಾರ ಯಾದವರು ಹರಿಕೆ ತಿರಿಸಲು ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಮೂಲದವರಾದ ದೇವಿಶಾ ಶೆಟ್ಟಿ ಅವರು ಭಾರತ ವಿಶ್ವಕಪ್ ಗೆದ್ದರೆ ಕಾಪು ಮಾರುಗುಡಿ ದೇಗುಲಕ್ಕೆ ಭೇಟಿ ನೀಡುವ ಹರಕೆ ಹೊತ್ತುಕೊಂಡಿದ್ದರು. ಸಧ್ಯ ಭಾರತ ವಿಶ್ವಕಪ್ ಬಿಜೇತ ತಂಡವಾಗಿದ್ದು ಈ ಹಿನ್ನಲೆಯಲ್ಲಿ ಕಾಪು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ದೇವಿ ದರ್ಶನ ಪಡೆದು ಮಾತನಾಡಿದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್. ವಿಶ್ವಕಪ್ ಪೈನಲ್ ಪಂದ್ಯದಲ್ಲಿ ನನಗೆ ಕೊನೆಯದಾಗಿ ಕ್ಯಾಚ್ ಹಿಡಿಯುವ ಅವಕಾಶ ಸಿಕ್ಕಿತ್ತು. ನಾನು ಯಾವುದೇ ರೀತಿಯಲ್ಲಿ ಬೌಂಡರಿ ಲೈನ್ ಮುಟ್ಟಿಲ್ಲ. ಈ ಕುರಿತು ಕೆಲವರು ಆಡಿಕೊಳ್ಳುತ್ತಾರೆ ಆದರೆ ನಾನು ಮಾತ್ರ ಬೌಂಡರಿ ಒಳಗೆ ಇದ್ದೆ ಎಂದು ಸ್ಪಷ್ಟಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button