17 ದಿನಗಳ ಕಾಲ ಫ್ರಾನ್ಸ್ ನಲ್ಲಿ ಕ್ರೀಡಾ ಜಾತ್ರೆ
ಪ್ರಗತಿವಾಹಿನಿ ಸುದ್ದಿ: ಐಫಲ್ ಟವರ್ ನಗರಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರ 33ನೇ ಒಲಿಂಪಿಕ್ಸ್ ಆಯೋಜನೆಗೆ ಸಜ್ಜಾಗಿದೆ. ಬರೋಬ್ಬರಿ ಒಂದು ಶತಮಾನದ ಬಳಿಕ ಒಲಿಂಪಿಕ್ ಕೂಟಕ್ಕೆ ಪ್ಯಾರಿಸ್ ಸಜ್ಜಾಗಿದ್ದು, ಇಡೀ ಕ್ರೀಡಾ ಜಗತ್ತಿನ ಗಮನ ಸೆಳೆಯುತ್ತಿದೆ. ಮುಂದಿನ 17 ದಿನಗಳ ಕಾಲ ನಡೆಯಲಿರುವ ಈ ಕ್ರೀಡಾ ಕಲರವದಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚಲು ಸಜ್ಜಾಗಿದ್ದಾರೆ.
ದೇಶದಲ್ಲಿ ರಾಜಕೀಯ ಅಸ್ಥಿರತೆ ನಡುವೆ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಪ್ಯಾರಿಸ್ ಆತಿಥ್ಯ ವಹಿಸಿಕೊಂಡಿದ್ದು, ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ವಿಶ್ವದ ಹಲವು ನಾಯಕರು ಸಾಕ್ಷಿಯಾಗಲಿದ್ದಾರೆ. ಒಲಿಂಪಿಕ್ಸ್ ನ ಸಂಪ್ರದಾಯದಂತೆ ಉದ್ಘಾಟನಾ ಸಮಾರಂಭವನ್ನು ಕ್ರೀಡಾಂಗಣದಲ್ಲಿ ಆಯೋಜಿಸುವ ಬದಲಿಗೆ ಕ್ರೀಡಾಂಗಣದ ಹೊರಗೆ ಸೀನ್ ನದಿಯಲ್ಲಿ ನಡೆಸಲಾಗುತ್ತಿದೆ.
10ಕ್ಕೂ ಪದಕಗಳ ನಿರೀಕ್ಷೆಯಲ್ಲಿ ಭಾರತ
ಕಳೆದ ಬಾರಿ 7 (ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚು) ಪದಕಗಳನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಭಾರತವು ಈ ಬಾರಿ 10ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. 117 ಕ್ರೀಡಾಪಟುಗಳು ಭಾರತ ಪ್ರತಿನಿಧಿಸುತ್ತಿದ್ದು, ಈ ಪೈಕಿ ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ ಸತತ ಎರಡನೇ ಚಿನ್ನ ಪದಕದ ಮೇಲೆ ಕಣ್ಣೀಟ್ಟಿದ್ದಾರೆ.
ಜೊತೆಗೆ ಬ್ಯಾಡ್ಮಿಂಟನ್, ಹಾಕಿ, ರೆಸ್ಲಿಂಗ್, ಶೂಟಿಂಗ್, ಬಾಕ್ಸಿಂಗ್ ನಲ್ಲಿ ಪದಕಗಳನ್ನು ನಿರೀಕ್ಷಿಸಲಾಗಿದೆ. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಹಾಕಿ ತಂಡದ ಗೋಲ್ ಕೀಪರ್ ಶ್ರೀಜೇಶ್ ಪಾಲಿಗೆ ಕೊನೇ ಒಲಿಂಪಿಕ್ಸ್ ಇದಾಗಿದೆ.
- 32 ಕ್ರೀಡೆಗಳು,
- 329 ಸ್ಪರ್ಧೆಯ ವಿವಿಧ ವಿಭಾಗಗಳು
- 10,500 ಕ್ರೀಡಾಪಟುಗಳು
- 117 ಭಾರತದ ಸ್ಪರ್ಧಿಗಳು
- ಕ್ರೀಡಾಕೂಟಕ್ಕಾಗಿ ವೆಚ್ಚವಾಗಿರುವ ಮೊತ್ತ: 79,593 ಕೋಟಿ,
- ಅಮೆರಿಕದ ರ್ಯಾಪರ್, ನಿರ್ಮಾಪಕ ಸ್ನೂಪ್ ಡಾಗ್,ಕ್ರೀಡಾ ಜ್ಯೋತಿಯನ್ನು ಬೆಳಗಲಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ