Latest

*ಹೋಟೆಲ್ ವಾಶ್ ರೂಮ್ ನಲ್ಲಿ ಸಿಬ್ಬಂದಿಯಿಂದಲೇ ಮೊಬೈಲ್ ಇಟ್ಟು ರೆಕಾರ್ಡ್; ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಹೋಟೆಲ್ ಸಿಬ್ಬಂದಿಯೇ ವಾಶ್ ರೂಮ್ ನಲ್ಲಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಘಟನೆ ಬೆಂಗಳೂರಿನ ಬಿಇಎಲ್ ರಸ್ತೆಯ ಕಾಫಿ ಶಾಪ್ ನಲ್ಲಿ ನಡೆದಿದೆ.

ಥರ್ಡ್ ವೇವ್ ಎಂಬ ಕೆಫೆಯಲ್ಲಿ ಈ ಘಟನೆ ನಡೆದಿದ್ದು, ಕೆಫೆಗೆ ಬಂದಿದ್ದ ಮಹಿಳೆ ವಾಶ್ ರೂಮ್ ಗೆ ಹೋಗಿದ್ದಾಗ ಮೊಬೈಲ್ ಇಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಮಹಿಳೆ ಸದಾಶಿವನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಕಾಫಿ ಶಾಪ್ ನ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಶಿವಮೊಗ್ಗ ಮೂಲದ ಮನೋಜ್ ಎಂದು ಗುರುತಿಸಲಾಗಿದೆ. ಕೆಫೆಯಲ್ಲಿ ಮನೋಜ್ ಕಾಫಿ ಮೇಕರ್ ಆಗಿದ್ದ. ಘಟನೆ ಬಳಿಕ ಕೆಲಸಯಿಂದ ಮನೋಜ್ ನನ್ನು ವಜಾಗೊಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button