LatestNational

*ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ: ಮಹಿಳೆಯ ಜಡೆ ಹಿಡಿದು ರಕ್ಷಿದ ಕ್ಯಾಬ್ ಚಾಲಕ*

ಪ್ರಗತಿವಾಹಿನಿ ಸುದ್ದಿ: ಸೇತುವೆ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಕೂದಲು ಹಿಡಿದು ಕಾರು ಚಾಲಕ ರಕ್ಷಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

Home add -Advt

ಕ್ಯಾಬ್ ನಲ್ಲಿ ಬಂದ ಮಹಿಳೆ ಅಟಲ್ ಸೇತುವೆ ಬಳಿ ಇಳಿದು ಏಕಾಏಕಿ ಸೇತುವೆಯ ರಕ್ಷಣಾ ಗೋಡೆ ಮೇಲೆ ಹತ್ತಿದ್ದಾಳೆ. ಅನುಮಾನಗೊಂಡ ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿ, ತಕ್ಷಣ ಕಾರಿನಿಂದ ಇಳಿದು ಹೋಗಿದ್ದಾನೆ. ಅಷ್ಟರಲ್ಲಿ ಮಹಿಳೆ ಸೇತುವೆಂದ ನದಿಗೆ ಹಾರಿದ್ದಾಳೆ. ಕ್ಷಣಾರ್ಧದಲ್ಲಿ ಚಾಲಕ ಆಕೆಯ ಜುಟ್ಟು ಹಿಡಿದು ರಕ್ಷಿಸಿದ್ದಾನೆ.

ಮಹಿಳೆ ಸೇತುವೆಯಲ್ಲಿ ನೇತಾಡುತ್ತಿದ್ದು, ಕಾರುಚಾಲಕ ಆಕೆಯ ತಲೆಕೂದಲು ಹಿಡಿದು ರಕ್ಷಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಮೇಲಕೆತ್ತಿ ಕರೆತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

Related Articles

Back to top button