National

*ಕಾರಿನ ಸಮೇತ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದ ದಂಪತಿ: ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ: ವರುಣಾರ್ಭಟಕ್ಕೆ ಗುಜರಾತ್ ನಲ್ಲಿ ಪ್ರವಾಹವುಂಟಾಗಿದ್ದು, ದಂಪತಿ ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ನಿರಂತರ ಮಳೆಯಿಂದಾಗಿ ಗುಜರಾತ್ ತತ್ತರಿಸಿದ್ದು, ಮಹಾಮಳೆ, ಪ್ರವಾಹದ ಅಬ್ಬರಕ್ಕೆ ಊರಿಗೆ ಊರೇ ಮುಳುಗಡೆಯಾಗಿವೆ. ಜನರ ಬದುಕು ದುಸ್ತರವಾಗಿದೆ. ಈ ನಡುವೆ ಪ್ರವಾಹದ ಅಬ್ಬರಕ್ಕೆ ಕಾರಿನ ಸಮೇತ ದಂಪತಿ ಕೊಚ್ಚಿಕೊಂಡು ಹೋಗಿದ್ದಾರೆ. ಜೀವ ಉಳಿಸಿಕೊಳ್ಳಲು ಕಾರಿನ ಟಾಪ್ ಮೇಲೆ ಹತ್ತಿ ಕುಳಿತು ಪರದಾಟ ನಡೆಸಿದ್ದಾರೆ. ಎರಡು ಗಂಟೆಗಳ ಕಾಲ ಪ್ರವಾಹದ ನೀರಿನಲ್ಲಿ ಕಾರಿನ ಟಾಪ್ ಮೇಲೆ ಕುಳಿತು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.

ಕೊನೆಗೂ ದಂಪತಿಯನ್ನು ರಕ್ಷಿಸಲಾಗಿದ್ದು, ಪವಾಡದ ರೀತಿಯಲ್ಲಿ ದಂಪತಿ ಜೀವ ಉಳಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತ್ ನ ಸಬರ್ ಕಾಂತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.


Related Articles

Back to top button