Kannada News

ಭೀಕರ ಅಪಘಾತ: ನಾಲ್ವರ ಸಾವು, ಪೊಲೀಸ್ ವಾಹನಕ್ಕೆ ಬೆಂಕಿ, ಪಿಎಸ್ಐ ಮೇಲೆ ಹಲ್ಲೆ

ಪ್ರಗತಿವಾಹಿನಿ ಸುದ್ದಿ, ವಿಜಯಪುರ –ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತಕ್ಕೆ ನಾಲ್ವರು ಬಲಿಯಾಗಿದ್ದಾರೆ. ಇಲ್ಲಿಗೆ ಸಮೀಪದ ಕೊಲ್ಹಾರ ಬಳಿ ಟಂ ಟಂ  ವಾಹನ ಮತ್ತು ಬಸ್ ಮಧ್ಯೆ ಡಿಕ್ಕಿಯಾಗಿದೆ.

ಪೊಲೀಸರು ಹಾಕುವ ದಂಡದಿಂದ ತಪ್ಪಿಸಿಕೊಳ್ಳಲು ವೇಗವಾಗಿ ಮತ್ತು ಅವಸರದಲ್ಲಿ ಟಂ ಟಂ ವಾಹನ ಮುನ್ನುಗ್ಗಿದ್ದೇ ಅವಘಟಕ್ಕೆ ಕಾರಣ. ಎದುರಿನಿಂದ ಬರುತ್ತಿದ್ದ ಬಸ್ ಗೆ ಗುದ್ದಿದೆ. ಸ್ಥಳದಲ್ಲೇ ನಾಲ್ವರು ಸಾವಿಗೀಡಾದರು.

Home add -Advt

ಪೊಲೀಸರು ದುಬಾರಿ ದಂಡ ಹಾಕುವುದು ಮತ್ತು ವಾಹನವನ್ನು ಬೆನ್ನಟ್ಟಿ ಹೋಗಿದ್ದೇ ಅ ಅಪಘಾತಕ್ಕೆ ಕಾರಣ ಎಂದು ಆಕ್ರೋಶಗೊಂಡ ಜನರು ಪಿಎಸ್ಐ ಮೇಲೆ ಹಲ್ಲೆ ಮಾಡಿ ಅವರು ಕೈ ಮುರಿದಿದ್ದಾರೆ. ಜೊತೆಗೆ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.

Related Articles

Back to top button