Politics

*ಶಾಸಕ ಸತೀಸ್ ಸೈಲ್‌ಗೆ ಕೋರ್ಟ್ ಶಿಕ್ಷೆ ವಿಧಿಸಿದ ಬೆನ್ನಲ್ಲೆ ಬೇಸರ ವ್ಯಕ್ತಪಡಿಸಿದ ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: ಬೇಲೆಕೇರಿ ಅದಿರು ಅಕ್ರಮ ಸಾಗಾಟ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಸತೀಸ್ ಸೈಲ್‌ಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ. ಕೋರ್ಟ್ ತೀರ್ಪಿನ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಇದು ವೆರಿ ಬ್ಯಾಡ್ ನ್ಯೂಸ್ ಎಂದಿದ್ದಾರೆ.

ಕಾನೂನಿಗೆ ಯಾರೇ ಆಗಲಿ ಗೌರವ ಕೊಡಬೇಕು. ಶಾಸಕ ಸೈಲ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅವರು ಮೇಲ್ಮನವಿ ಸಲ್ಲಿಸಬಹುದು ಎನಿಸುತ್ತೆ. ಆದರೆ ಕಾನೂನಿಗೆ ಎಲ್ಲರೂ ತಲೆ ಬಾಗಬೇಕು. ಇನ್ನು ಶಾಸಕ ಸ್ಥಾನ ವಜಾ ಬಗ್ಗೆ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಲೀಗಲಿ ಏನು ಆಗಬೇಕೋ ಅದು ಆಗುತ್ತದೆ ಎಂದು ತಿಳಿಸಿದರು.

ಉಪಚುನಾವಣೆ ಸಂದರ್ಭದಲ್ಲೇ ನಡೆದ ಈ ಬೆಳವಣಿಗೆಯಿಂದ ಪಕ್ಷಕ್ಕೆ ಮುಜುಗರ ಆಗಲ್ವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಡಿಕೆಶಿ ಅವರು ಉತ್ತರಿಸದೇ ಹೊರಟು ಹೋದರು. ಬೇಲೆಕೇರಿ ಹಗರಣದಲ್ಲಿ ಒಟ್ಟು 6 ಪ್ರಕರಣಗಳಲ್ಲಿ 7 ಅಪರಾಧಿಗಳ ವಿರುದ್ಧ ಕೋರ್ಟ್ ಶಿಕ್ಷೆ ಹಾಗೂ ದಂಡವನ್ನು ಪ್ರಕಟಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button