*ಬೆಳಗಾವಿ ಅಧಿವೇಶನ ಆರಂಭ ದಿನವೇ ಮುತ್ತಿಗೆ ಆತಂಕ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 2ಎ ಮೀಸಲಾತಿಗಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿರುವ ಪಂಚಮಸಾಲಿ ಸಮಾಜ, ಈ ವರ್ಷವೂ ಬೆಳಗಾವಿ ಅಧಿವೇಶನದ ವೇಳೆ ಹೋರಾಟ ತೀವ್ರಗೊಳಿಸಲು ಮುಂದಾಗಿದೆ. ಅಧಿವಶನದ ಮೊದಲ ದಿನವೇ ಸುವರ್ಣ ವಿಧಾನಸೌಧಕ್ಕೆ ಟ್ಯಾಕ್ಟರ್ Rally ಮೂಲಕ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ನವಂಬರ್ 16 ರಂದು, ಶನಿವಾರ ಮಧ್ಯಾಹ್ನ 2 ಗಂಟೆಗೆ ರಾಜ್ಯಮಟ್ಟದ ಪಂಚಮಸಾಲಿ ಪೂರ್ವಭಾವಿ ಸಭೆ ನಡೆಯಲಿದೆ.
*ಪಂಚಮಸಾಲಿ- ಮಲೆಗೌಡ ದೀಕ್ಷಾ- ಗೌಡ ಲಿಂಗಾಯತರಿಗೆ 2A ಹಾಗೂ ಲಿಂಗಾಯತ OBC ಮೀಸಲಾತಿಗೆ ಹಕ್ಕೊತ್ತಾಯಿಸಿ ಆರಂಭಗೊಂಡಿರುವ 7ನೇ ಹಂತದ ಚಳುವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
*ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಗೂ ಟ್ಯಾಕ್ಟರ್ Rally*
16 ನೇ ನವಂಬರ್ 2024 ರ ಶನಿವಾರದಂದು ಮಧ್ಯಾಹ್ನ 2 ಕ್ಕೆ ಹುಬ್ಬಳ್ಳಿಯ ಪೃಥ್ವಿ ಪ್ಯಾರಡೈಸ್ ಹೋಟೆಲ್ ನಲ್ಲಿ *ರಾಜ್ಯ ಮಟ್ಟದ ಪಂಚಮಸಾಲಿ ಪೂರ್ವಭಾವಿ ಸಭೆ ನಡೆಯಲಿದೆ. ಈ ಸಭೆಗೆ ಪಂಚಮಸಾಲಿ- ದೀಕ್ಷಾ-ಲಿಂಗಾಯತ ಗೌಡ-ಮಲೆಗೌಡ ಪದಾಧಿಕಾರಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಇವರೊಂದಿಗೆ ಹಾಲಿ, ಮಾಜಿ ಸಚಿವ, ಸಂಸದ , ಶಾಸಕರು, ರಾಷ್ಟ್ರೀಯ, ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು, ಮಹಿಳಾ , ಯುವ , ಪಂಚಸೇನಾ , ರೈತ , ನೌಕರ , ವಿದ್ಯಾರ್ಥಿ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2A ಹಾಗೂ ಲಿಂಗಾಯತ obc ಮೀಸಲಾತಿ ಪಡೆಯುವ ನಿರಂತರ ಚಳುವಳಿಗೆ ಬೆಂಬಲ ನೀಡಬೇಕೆಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದ್ದಾರೆ*.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ ಆರಂಭವಾಗಲಿದೆ ಎನ್ನಲಾಗುತ್ತಿರುವ ವಿಧಾನ ಮಂಡಳದ ಅಧಿವೇಶನದ ವೇಳೆ ಮುತ್ತಿಗೆ ಹಾಕಲು ಪಂಚಮಸಾಲಿ ಹೋರಾಟಗಾರರು ನಿರ್ಧರಿಸಿದ್ದು, ಈ ಕುರಿತು ಹುಬ್ಬಳ್ಳಿ ಸಮಾವೇಶದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸುವರ್ಣ ವಿಧಾನ ಸೌಧಕ್ಕೆ ಟ್ಯಾಕ್ಟರ್ Rally ಮೂಲಕ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
ಕಳೆದ ಬಾರಿಯ ಅಧಿವೇಶನದ ವೇಳೆ ಮುತ್ತಿಗೆ ಹಾಕಲು ಹೋರಾಟಗಾರರು ಮುಂದಾಗಿದ್ದರು. ಸುವರ್ಣ ವಿಧಾನಸೌಧದ ಸಮೀಪವೇ ಬೃಹತ್ ಸಮಾವೇಶವನ್ನು ಸಹ ನಡೆಸಿದ್ದರು. ಆದರೆ ಆಗ ಸರಕಾರದಿಂದ ಮೀಸಲಾತಿ ಕುರಿತು ಕ್ರಮದ ಭರವಸೆ ಸಿಕ್ಕಿದ್ದ ಕಾರಣಕ್ಕೆ ಕೈ ಬಿಡಲಾಗಿತ್ತು. ಇದೀಗ ಪ್ರತಿ ಜಿಲ್ಲೆ, ತಾಲೂಕು ಹಾಗೂ ಹೋಬಳಿಗಳಲ್ಲಿ ಸಹ ಸಭೆ ನಡೆಸಲಾಗುತ್ತಿದ್ದು, ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ.
ಬುಧವಾರ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಪಂಚಮಸಾಲಿ ಹೋರಾಟಗಾರರ ಸಭೆ ಆಯೋಜಿಸಲಾಗಿದೆ. ಬಸವಜಯ ಮೃತ್ಯುಂಜಯ ಸ್ವಾಮಿಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವು ಮುಖಂಡರು ಭಾಗವಹಿಸುವ ನಿರೀಕ್ಷೆ ಇದೆ.
ಅಕ್ಟೋಬರ್ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಪಂಚಮಸಾಲಿ ಹೋರಾಟಗಾರರ ಸಭೆ ನಡೆಸಿದ್ದರು. ಆದರೆ ಆ ವೇಳೆಗಾಗಲೆ ವಿಧಾನ ಸಭೆಯ ಉಪಚುನಾವಣೆ ಘೋಷಣೆಯಾಗಿದ್ದರಿಂದ ಯಾವುದೇ ಖಚಿತ ಭರವಸ ನೀಡಿರಲಿಲ್ಲ. ಭರವಸೆ ಸಿಗದ ಹಿನ್ನೆಲೆಯಲ್ಲಿ ಪಂಚಮಸಾಲಿ ಸ್ವಾಮಿಗಳು ಪ್ರತಿಭಟನೆ ತೀವ್ರಗೊಳಿಸುವ ಘೋಷಣೆ ಮಾಡಿದ್ದರು.
ಆ ನಂತರದಲ್ಲಿ ಅವರು ಹಲವಾರು ಸಭೆಗಳನ್ನು ನಡೆಸುತ್ತ ಬಂದಿದ್ದಾರೆ. ಈ ಬಾರಿ ನಿರ್ಣಾಯಕ ಹೊರಾಟ ಮಾಡುವುದಾಗಿ ಅವರು ಎಚ್ಚಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನಕ್ಕೆ ಆತಂಕ ಎದುರಾಗಿದೆ. ಪಂಚಮಸಾಲಿ ಸಚಿವರು, ಶಾಸಕರು ಈ ಪ್ರತಿಭಟನೆಯ ಬಿಸಿ ತಟ್ಟದಂತೆ ಯಾವ ರೀತಿಯಲ್ಲಿ ಕ್ರಮ ವಹಿಸಲಿದ್ದಾರೆ ಎನ್ನುವುದು ಕಿತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ