EducationSports

*ರಾಷ್ಟ್ರಮಟ್ಟದ ರೋಪ್ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ಬೆಳಗಾವಿ ವಿದ್ಯಾರ್ಥಿನಿಯ ಸಾಧನೆ*

ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋವಾದ ಪೆಡ್ಡೆಮ್ ಸ್ಟೇಡಿಯಂ ನಲ್ಲಿ ನ.30 ರಿಂದ ಡಿ.2ರ ವರೆಗೆ ನಡೆದ ರಾಷ್ಟ್ರಮಟ್ಟದ ರೋಪ್ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ  ಪಟ್ಟಣದ ಲಿಟಲ್ ಹಾರ್ಟ್ಸ್ ಸ್ಕ್ವಾಲರ್ ಫೌಂಡೆಶನ್ ಆಂಗ್ಲ್ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಫಕೀರಗೌಡ ಸಿದ್ದನಗೌಡರ, ಡಬಲ್ ಡಚ್ಚ ಸ್ಪೀಡ್ ರಿಲೇ ಮತ್ತು ಡಬಲ್ ಅಂಡರ್ ಸ್ಪೀಡ್ ರಿಲೇ ಸ್ಕಿಪ್ಪಿಂಗ್ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟದಲ್ಲಿ ದ್ವೀತಿಯ ಸ್ಥಾನ ಪಡೆದು 2025 ರಲ್ಲಿ ಅಮೆರಿಕಾ ದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ರೋಪ್ ಸ್ಕಿಪ್ಪಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇವರ ಅದ್ವೀತಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಸಲೀನ್ ಜೈಮನ್, ಕಾರ್ಯದರ್ಶಿ ಆಕಾಶ ಜೈಮನ್, ಪ್ರಾರ್ಚಾರ್ಯೆ ಆಸ್ಮಾ ಖಾಜಿ, ಶಿಕ್ಷಕರಾದ ವೀಣಾ ಕೌಜಲಗಿ, ಪ್ರೇಮಾ ತಲ್ಲೂರ, ಕುಸುಮಾ ಕುಲಕರ್ಣಿ, ದಾಕ್ಷಾಯಣಿ ಕಬ್ಬುರ, ದೀಪಾ ಉಳೆಗಡ್ಡಿ, ಕ್ಯಾರೆನ್ ಜೈಮನ್ ಭಾರತಿ ಪತ್ತಾರ, ಚಂಪಾ, ಗೊದಾವರಿ ಹೀರೆಮಠ‌, ಸ್ಕಿಪ್ಪಿಂಗ್  ತರಬೇತಿದಾರ  ಹಣಮಂತ ಮೇಗೆರಿ,  ಹಾಗೂ ಲಿಟಲ್ ಹಾರ್ಟ್  ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಹೊಸೂರ ಗ್ರಾಮದ ಜನತೆ ಅಭಿನಂದಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button