NationalPolitics

*ಮಹಾರಾಷ್ಟ್ರದಲ್ಲಿ ಕರ್ನಾಟಕದ ಶಾಸಕರಿಗೆ ತಡೆ; ಶಿವಸೇನೆ ಕಾರ್ಯಕರ್ತರಿಂದ ಕಿರಿಕ್*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಮಾಜಿ ಸಚಿವ, ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಮಹಾರಾಷ್ಟ್ರದ ಕೊಲ್ಲಾಪುರದ ಅಂಬಾಬಾಯಿ ದೇವಸ್ಥಾನಕ್ಕೆ ಹೋಗಲು ಶಿವಸೇನೆ ಕಾರ್ಯಕರ್ತರು ತಡೆಯೊಡ್ಡಿದ ಘಟನೆ ನಡೆದಿದೆ.

ಕೊಲ್ಲಾಪುರ ಜಿಲ್ಲೆಯ ಅಂಬಾಬಾಯಿ ದೇವಸ್ಥಾನಕ್ಕೆ ಶಾಸಕ ಪ್ರಭು ಚೌವ್ಹಾಣ್ ಸೇರಿದಂತೆ ಹಲವು ಮುಖಂಡರು ತೆರಳಿದ್ದರು. ಈ ವೇಳೆ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು, ಶಾಸಕರನ್ನು ತಡೆದು ನಿಲ್ಲಿಸಿದ್ದಾರೆ. ಡಿ.9ರಂದು ಬೆಳಗಾವಿಯಲ್ಲಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್ ಗೆ ಯಾಕೆ ಅವಕಾಶ ಕೊಟ್ಟಿಲ್ಲ? ಮಹಾಮೇಳಾವ್ ನಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ನಾಯಕರನ್ನು ತಡೆದಿದ್ದೇಕೆ ಎಂದು ಪ್ರಶ್ನಿಸಿ, ಇಂದು ಕರ್ನಾಟಕದ ನಾಯಕರಿಗೆ ಮಹಾರಾಷ್ಟ್ರದಲ್ಲಿ ತಡೆಯೊಡ್ಡಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರಭು ಚೌವ್ಹಾಣ್, ನಮ್ಮನ್ನು ತಡೆದಿಲ್ಲ. ಆದರೆ ಗಡಿಭಾಗದಲ್ಲಿ ಮಹಾರಾಷ್ಟ್ರದ ರಜಕಾರಣಿಗಳೊಂದಿಗೆ ತೋರುತ್ತಿರುವ ವರ್ತನೆ ಬಗ್ಗೆ ಗಮನಕ್ಕೆ ತಂದಿದ್ದಾರೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button